ಸುಮಲತಾ ಅವರದು ಗಿಣಿ ಪಾಠ, ಮೈತ್ರಿ ಪಕ್ಷಗಳೇ ಹೆಚ್ಚು ಸ್ಥಾನ ಗೆಲ್ಲುತ್ತವೆ- ಹಳ್ಳಿಹಕ್ಕಿಯ ವಿಶ್ವಾಸದ ನುಡಿ - news kannada
🎬 Watch Now: Feature Video

ಯಾರೋ ಹೇಳಿ ಕೊಟ್ಟಿದ್ದನ್ನಷ್ಟೇ ಹೇಳುವ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾರದು ಗಿಳಿಪಾಠ. ಅದನ್ನು ಬಿಟ್ಟರೇ ಅವರಿಗೆ ಏನೂ ಗೊತ್ತೇ ಇಲ್ಲ ಅಂತಾ ಜೆಡಿಎಸ್ ಸಾರಥಿ ಹೆಚ್. ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. ಮೈಸೂರಿದಲ್ಲಿ ಈಟಿವಿ ಭಾರತ್ ಜೊತೆ ಮಾತನಾಡಿರುವ ಅವರು, ನಾವೆಲ್ಲರೂ ಮೈತ್ರಿ ಧರ್ಮವನ್ನು ಪಾಲನೆ ಮಾಡಬೇಕು. ಚುನಾವಣಾ ರಂಗು ನೋಡಿದರೆ, ಬಿಜೆಪಿಗಿಂತ ಮೈತ್ರಿ ಪಕ್ಷ ಹೆಚ್ಚಿನ ಸ್ಥಾನ ಪಡೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.