ಹಾಡಿನ ಮೂಲಕ ವೈದ್ಯರು, ಪೊಲೀಸರಿಗೆ ಧನ್ಯವಾದ ಸಲ್ಲಿಸಿದ ಕಮಲಾಪುರ ಗ್ರಾಮಸ್ಥರು
🎬 Watch Now: Feature Video
ಕಲಬುರಗಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಕಲಬುರಗಿ ಜನ ವಿಭಿನ್ನವಾಗಿ ಬೆಂಬಲ ಸೂಚಿಸಿದ್ದಾರೆ. ಕಮಲಾಪುರ ಗ್ರಾಮದ ಜನರು ಹಾಡು ರಚಿಸಿ ಹಾಡುವ ಮೂಲಕ ಕೊರೊನಾ ವಿರುದ್ಧ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಮಾತ್ರವಲ್ಲ, ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಾಗೂ ಪತ್ರಕರ್ತರಿಗೆ ತಮ್ಮದೇ ಹಾಡಿನ ಶೈಲಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಗ್ರಾಮದ ಗೌಡಗೋಳ ಕುಟುಂಬದ ರಾಕಮ್ಮ, ಪಾರ್ವತಿ, ಸರಸ್ವತಿ, ಶೈಲಜಾ ಅವರು ಈ ಹಾಡು ರಚಿಸಿದ್ದಾರೆ. ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ಅರ್ಪಿಸಿ ಗಮನ ಸೆಳೆದಿದ್ದಾರೆ.