ಮೇಯರ್ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಮುಂಚೆಯೇ ಹೇಳಿದ್ದೆ: ಸಂಸದ ಸಿದ್ದೇಶ್ವರ್ - MP G M Siddesh news
🎬 Watch Now: Feature Video

ದಾವಣಗೆರೆ: ಮೇಯರ್ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದು ನಾನು ಮುಂಚೆಯೇ ಹೇಳಿದ್ದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ. ಪಾಲಿಕೆ ಚುನಾವಣೆ ಬಳಿಕ ಮಾತನಾಡಿದ ಅವರು, ಪಕ್ಷದ ವರಿಷ್ಠರ ಆದೇಶದಂತೆ ಎಸ್.ಟಿ.ವಿರೇಶ್ ಮೇಯರ್ ಆಗಿ ಹಾಗೂ ಶಿಲ್ಪ ಉಪಮೇಯರ್ ಆಗಿ ಆಯ್ಕೆ ಆಗಿದ್ದಾರೆ. ಇಂದು ಚುನಾವಣೆ ನಡೆದಿದ್ದು, 29 ಜನ ನಮ್ಮ ಪರ ಮತ ಚಲಾಯಿಸಿದ್ದಾರೆ. ಇನ್ನುಳಿದ 22 ಜನ ಕಾಂಗ್ರೆಸ್ ಪರ ಮತ ಚಲಾವಣೆ ಮಾಡಿದ್ದರಿಂದ ಬಿಜೆಪಿ ಪಕ್ಷ ಮೇಯರ್ ಹಾಗೂ ಉಪಮೇಯರ್ ಎರಡೂ ಸ್ಥಾನದಲ್ಲಿ ಜಯಭೇರಿ ಬಾರಿಸಿದೆ. ಕಳೆದ ಬಾರಿ ಕೂಡ ನಮ್ಮ ಪಕ್ಷಕ್ಕೆ ಮೇಯರ್ ಸ್ಥಾನ ಒಲಿದಿತ್ತು. ಇನ್ನು ಕಾಂಗ್ರೆಸ್ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ಬಿಜೆಪಿ ಸೇರಿದ ಉದ್ದೇಶ ಅವರ ವೈಯಕ್ತಿಕ. ನಮ್ಮ ಪಕ್ಷಕ್ಕೆ ಸೇರುತ್ತೇನೆ ಅಂತ ಬಂದ್ರು, ನಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದೇವೆ. ದೇವರಮನೆ ಶಿವಕುಮಾರ್ ಅವರಿಗೆ ಯಾವುದೇ ಅಮಿಷ ಒಡ್ಡಿಲ್ಲ ಎಂದರು.