ಮೌಢ್ಯ ಪ್ರತಿಬಂಧಕಾಜ್ಞೆ ಕಾನೂನಿಗೆ ತಿದ್ದುಪಡಿ ತರಬೇಕಿದೆ: ಹುಲಿಕಲ್ ನಟರಾಜ್ ಒತ್ತಾಯ - Hulikal nataraj reaction about amendment to the immunity law
🎬 Watch Now: Feature Video
ತುಮಕೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಮೌಢ್ಯ ಪ್ರತಿಬಂಧಕಾಜ್ಞೆ ಕಾನೂನಿಗೆ ಸಾಕಷ್ಟು ತಿದ್ದುಪಡಿ ತರಬೇಕಿದೆ. ಇನ್ನು ಹಲವಾರು ಅಂಶಗಳನ್ನು ಸೇರ್ಪಡೆಗೊಳಿಸಿ ರಾಜ್ಯದಲ್ಲಿ ಮೌಢ್ಯಾಚರಣೆಗೆ ಸಂಪೂರ್ಣ ಕಡಿವಾಣ ಹಾಕಬೇಕಿದೆ ಎಂದು ವೈಜ್ಞಾನಿಕ ಚಿಂತಕ ಹುಲಿಕಲ್ ನಟರಾಜ್ ತಿಳಿಸಿದ್ದಾರೆ. ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಇಂದಿಗೂ ಕೂಡ ಕಲ್ಯಾಣ ಕರ್ನಾಟಕ ಭಾಗ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಮೌಢ್ಯ ಆಚರಣೆಗಳು ಜಾರಿಯಲ್ಲಿದ್ದು, ಈ ಕುರಿತು ಜನರಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದ್ರು.