ಕಾಮದಹನ ಮಾಡುವ ಮೂಲಕ ಹೋಳಿ ಆಚರಿಸಿದ ಬೀದರ್ ಜನತೆ - ಹೋಳಿ ಆಚರಿಸಿದ ಬೀದರ್ ಜನತೆ
🎬 Watch Now: Feature Video
ಬೀದರ್: ಕಾಮನ ಹುಣ್ಣಿಮೆ ನಿಮಿತ್ತ ಜಿಲ್ಲೆಯಾದ್ಯಂತ ಕಾಮದಹನ ಮಾಡುವ ಮೂಲಕ ನಿವಾಸಿಗರು ಹೋಳಿ ಹಬ್ಬವನ್ನು ಆಚರಣೆ ಮಾಡಿದ್ರು. ಬಡಾವಣೆ, ಹಳ್ಳಿಗಳಲ್ಲಿ ಬೇಡವಾದ ವಸ್ತುಗಳು, ಕಟ್ಟಿಗೆ, ಕುಳ್ಳು ಸೇರಿಸಿ ಅದಕ್ಕೆ ಪೂಜೆ ಮಾಡಿ ಬೆಂಕಿ ಇಡುವ ಮೂಲಕ ಕಾಮದಹನ ಮಾಡಿ ಸಂಭ್ರಮಿಸಿದರು. ಈ ವೇಳೆಯಲ್ಲಿ ಜನರು ಮನೆಯಿಂದ ತಂದ ಉಪ್ಪು, ಜೋಳದ ಹಿಟ್ಟು ಬೆಂಕಿಗೆ ಹಾಕಿ ಸಂಪ್ರದಾಯಬದ್ಧ ಆಚರಣೆ ಮಾಡಿದರು. ಅಲ್ಲದೆ ಈ ಬೆಂಕಿಯಿಂದ ಕಡಲೆ ಹಾಗೂ ಕೊಬ್ಬರಿಯನ್ನು ಸುಟ್ಟಿ ಅದನ್ನು ಸವಿದ್ರೆ ಯಾವುದೇ ರೋಗ ಬರೋದಿಲ್ಲ ಎಂಬ ನಂಬಿಕೆ ಜನರಲ್ಲಿ ಇದೆ.