ರಾಮನಗರ-ಕೋಲಾರದಲ್ಲಿ ರೈತರಿಂದ ಹೆದ್ದಾರಿ ಬಂದ್... - ಕೋಲಾರದ ಹಂಚಾಳ ಗೇಟ್ ಬಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10522731-thumbnail-3x2-hgf.jpg)
ಕೋಲಾರ/ರಾಮನಗರ: ಕೋಲಾರದ ಹಂಚಾಳ ಗೇಟ್ ಬಳಿ, ಕೋಲಾರ-ಬಂಗಾರಪೇಟೆ ರಾಜ್ಯ ಹೆದ್ದಾರಿ ತಡೆದ ಪ್ರತಿಭಟನಾಕಾರರು, ರಾಜ್ಯ ಹೆದ್ದಾರಿಗೆ ಮುಳ್ಳು ತಂತಿಯನ್ನ ಹಿಡಿದು ರಸ್ತೆ ತಡೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆ ರದ್ಧುಗೊಳಿಸುವಂತೆ ಒತ್ತಾಯಿಸಿದರು. ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೇಷ್ಮೆನಗರಿ ರಾಮನಗರದಲ್ಲಿ ಪ್ರತಿಭಟನೆ ಜೋರಾಗಿದೆ. ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಡೆಸಿ ಹೋರಾಟ ನಡೆಸುತ್ತಿದ್ದಾರೆ.