ಕಲಬುರಗಿಯಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಧಾರಾಕಾರ ಮಳೆ - Kalaburagi news
🎬 Watch Now: Feature Video
ಕಲಬುರಗಿ: ಬಿಸಿಲಿನಿಂದ ಬಸವಳಿದ ನಗರದ ಜನತೆಗೆ ವರುಣ ಇಂದು ತಂಪೆರೆದಿದ್ದಾನೆ. ಗುಡುಗು, ಸಿಡಿಲು, ಆಲಿಕಲ್ಲು ಹಾಗೂ ಬಿರುಗಾಳಿ ಸಮೇತ ಸಾಯಂಕಾಲ 5 ಗಂಟೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ವರುಣನ ಕೃಪೆಯಿಂದ ತಂಪನೆಯ ವಾತಾವರಣ ನಿರ್ಮಾಣವಾಗಿದೆ. ಇನ್ನು ಬಿಸಿಲಿನಿಂದ ಬಸವಳಿದ ಜಿಲ್ಲೆಯ ಜನತೆಯ ಮುಖದಲ್ಲಿ ಮಂದಹಾಸ ಮೂಡಿದೆ.