ಹಳ್ಳ ತುಂಬೈತಿ ಬೇಗ ಬನ್ರೀ ಅಂದ್ರೂ ಮಾತು ಕೇಳಲಿಲ್ಲ.. ಹೊಲಕ್ಕೆ ಹೋದ ದಂಪತಿ ನೆರೆಗೆ ಸಿಲುಕಿದರು... - ಪ್ರವಾಹ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4823644-thumbnail-3x2-ctd.jpg)
ನಿನ್ನೆ ಮೊನ್ನೆವರೆಗೂ ಮಳೆ ಆಗ್ತಿಲ್ಲ ಅಂತಾ ಕೋಟೆನಾಡಿನ ಜನರು ಮಾತಾಡಿಕೊಳ್ತಿದ್ರು. ಆದರೆ, ಈಗ ಜಿಲ್ಲೆಯ ಹಲವೆಡೆ ಒಳ್ಳೆ ಮಳೆಯಾಗ್ತಿದ್ದು ಹಳ್ಳ-ಕೊಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ಹಳ್ಳ ತುಂಬಿ ಹರಿಯುತ್ತಿದ್ದರೂ ಇಲ್ಲಿನ ದೇವಪುರ ಗ್ರಾಮದ ಗಂಗಮ್ಮ-ಕರಿಯಪ್ಪ ಎಂಬ ದಂಪತಿ ಮಾತ್ರ ತಮ್ಮ ಮೆಕ್ಕೆಜೋಳದ ಗದ್ದೆ ಕಾಯಲು ಮುಂದಾಗಿದ್ದಾರೆ. ಈ ವೇಳೆ ಹಳ್ಳದಲ್ಲಿ ನೀರು ಇನ್ನಷ್ಟು ಪ್ರಮಾಣದಲ್ಲಿ ಹೆಚ್ಚಾದ ಕಾರಣ ಹಳ್ಳವನ್ನು ದಾಟಲಾಗದೇ ದಂಪತಿ ನೆರೆಯಲ್ಲಿ ಸಿಲುಕಿದ್ದಾರೆ. ಬಳಿಕ ದಂಪತಿಯನ್ನು ರಕ್ಷಣಾ ತಂಡ ಹಾಗೂ ಸ್ಥಳೀಯರು ತೆಪ್ಪದ ಮೂಲಕ ಕಾಪಾಡಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.