ಬರೀ ಮೈಯಲ್ಲೇ ಅಪ್ಪು ಸಮಾಧಿ ದರ್ಶನಕ್ಕೆ ಹೊರಟ 'ವೀರಕನ್ನಡಿಗ'ನ ಅಭಿಮಾನಿ..! - ನಟ ಪುನೀತ್ ರಾಜಕುಮಾರ ನಿಧನ
🎬 Watch Now: Feature Video
ದಾವಣಗೆರೆ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth rajkumar) ನಮ್ಮನ್ನೆಲ್ಲ ಅಗಲಿ ಇಂದಿಗೆ 16 ದಿನಗಳು ಕಳೆದಿವೆ. ಅಪ್ಪು ಅಭಿಮಾನಿಗಳಿಗೆ (Puneeth rajkumar fans) ಇನ್ನೂ ಆ ನೋವಿನಿಂದ ಹೊರ ಬರಲು ಆಗುತ್ತಿಲ್ಲ. ನಿತ್ಯ ಸಾವಿರಾರು ಜನರು ಪುನೀತ್ ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸವಣೂರು ಗ್ರಾಮದ ಸಿದ್ದು ಎನ್ನುವ ಯುವಕ ಅಪ್ಪು ಸಮಾಧಿ ದರ್ಶನ (Puneeth rajkumar fan cycle rally) ಪಡೆಯಲು ಸೈಕಲ್ ಯಾತ್ರೆ ಕೈಗೊಂಡಿದ್ದಾನೆ. ಹೊಟ್ಟೆಯ ಮೇಲೆ ಅಯಿಲ್ ಪೇಂಟ್ ನಿಂದ 'ಯುವರತ್ನನ ಚಿತ್ರ' ಬಿಡಿಸಿಕೊಂಡು ಬರೀ ಮೈಯಲ್ಲಿ ಸೈಕಲ್ ಏರಿ ಬೆಂಗಳೂರಿಗೆ ಪಯಣ ಆರಂಭಿಸಿದ್ದಾನೆ. ಸಿದ್ದುವಿಗೆ ದಾವಣಗೆರೆಯ ರಸ್ತೆಯೂದ್ದಕ್ಕೂ ಸಾಕಷ್ಟು ಅಪ್ಪು ಅಭಿಮಾನಿಗಳು ಸಾಥ್ ನೀಡಿ ಜೈಕಾರ ಹಾಕಿದರು.