ಹಾವೇರಿ: ಕೋವಿಡ್ನಿಂದ ಕಾನ್ಸ್ ಸ್ಟೇಬಲ್ ಗುಣಮುಖ - corona news
🎬 Watch Now: Feature Video
ಹಾವೇರಿ: ಕೊರೊನಾ ಸೋಂಕಿತನಾಗಿ ಕೋವಿಡ್ ಆಸ್ಪತ್ರೆ ಸೇರಿದ್ದ ಕಾನ್ಸ್ ಸ್ಟೇಬಲ್ ಗುಣಮುಖರಾದ ಹಿನ್ನೆಲೆ ಅವರನ್ನು ಮಂಗಳವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಸಮವಸ್ತ್ರದಲ್ಲಿ ಬಂದ ಕಾನ್ಸ್ಸ್ಟೇಬಲ್ಗೆ ಪೊಲೀಸ್ ಸಿಬ್ಬಂದಿ ಹೂ ಹಾಕುವ ಮೂಲಕ ಶುಭ ಹಾರೈಸಿದ್ರು. ಹಾವೇರಿ ಜಿಲ್ಲಾ ಎಸ್ಪಿ ಕೆ.ಜಿ. ದೇವರಾಜ್ ಪುಷ್ಪಗುಚ್ಛ ನೀಡಿ ಶುಭಕೋರಿದ್ರು. ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಮಾಲಾರ್ಪಣೆ ಮಾಡುವ ಮೂಲಕ ಕಾನ್ಸ್ಸ್ಟೇಬಲ್ಗೆ ಶುಭಹಾರೈಸಿದರು. 41 ವರ್ಷದ ಕಾನ್ಸ್ ಸ್ಟೇಬಲ್ ಇದೇ 14 ರಂದು ಸೋಂಕು ಕಾಣಿಸಿಕೊಂಡ ಹಿನ್ನೆಲೆ ಕೋವಿಡ್ ಆಸ್ಪತ್ರೆ ದಾಖಲಾಗಿದ್ದರು. ಅಲ್ಲದೇ ರೋಗಿ-7030 ನಂಬರ್ ನೀಡಲಾಗಿದ್ದ ಕಾನ್ಸ್ ಸ್ಟೇಬಲ್‌ನಲ್ಲಿ ಯಾವುದೇ ರೋಗಲಕ್ಷಣಗಳಿರಲಿಲ್ಲ, ಆದರೂ ಸಹ ವರದಿ ಪಾಸಿಟಿವ್ ಬಂದಿದ್ದರಿಂದ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು.