ಕಲಾದಗಿ ಗ್ರಾಮದ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ ಬೆಣ್ಣೆನಗರಿ ಜನತೆ!
🎬 Watch Now: Feature Video
ದಾವಣಗೆರೆ: ರಾಜ್ಯದಲ್ಲಿ ಈ ಬಾರಿ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಬೆಣ್ಣೆನಗರಿಯ ಜನತೆ ಸಹಾಯ ಹಸ್ತ ಚಾಚಿದ್ದಾರೆ. ಜಿಲ್ಲೆಯ ಹದಡಿ ಗ್ರಾಮದ ಕಟ್ಟೆ ಬಳಗದ ಸದಸ್ಯರು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ನೆರೆ ಸಂತ್ರಸ್ತರಿಗೆ ತಾವು ಸಂಗ್ರಹಿಸಿದ 125 ಕ್ವಿಂಟಾಲ್ ಅಕ್ಕಿ, ಬಟ್ಟೆ ಹಾಗೂ ರೊಟ್ಟಿ ಸೇರಿದಂತೆ ವಿವಿಧ ಉಪಯುಕ್ತ ಸಾಮಗ್ರಿಗಳನ್ನು ಖುದ್ದಾಗಿ ಕಲಾದಗಿ ಗ್ರಾಮದ ನೆರೆ ಸಂತ್ರಸ್ತರಿಗೆ ವಿತರಿಸಿದ್ದಾರೆ. ಹದಡಿ ಗ್ರಾಮದ ಪ್ರತಿ ಮನೆ ಮನೆಗೆ ತೆರಳಿದ ಕಟ್ಟೆ ಬಳಗದ ಸದಸ್ಯರು ಹಾಗೂ ಗ್ರಾಮಸ್ಥರು ನೆರೆ ಪೀಡಿತರಿಗೆ ನೆರವಾಗುವಂತೆ ಮನವಿ ಮಾಡಿದರು.ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.