ದೇವೇಗೌಡ ಪರ ಪ್ರಚಾರಕ್ಕೆ ಕಿರಿಯ ಮಗ ಹೆಚ್.ಡಿ. ರಮೇಶ್.. ತೆರೆಮರೆಗಿದ್ದ ಪುತ್ರ ಮೊದಲ ಬಾರಿ ತಂದೆಗಾಗಿ ಮತಭಿಕ್ಷೆ! - ಪ್ರಚಾರ
🎬 Watch Now: Feature Video
ಮಾಜಿ ಪ್ರಧಾನಿ ದೇವೇಗೌಡರ ಕಿರಿಯ ಪುತ್ರ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೆಚ್. ಡಿ ರಮೇಶ್ ಬೆಂಗಳೂರಿನಿಂದ ತುಮಕೂರಿಗೆ ತೆರಳುವಾಗ ನೆಲಮಂಗಲ ತಾಲೂಕಿನ ಎಡೇಹಳ್ಳಿಯಲ್ಲಿ ಕಾರ್ಯಕರ್ತರ ಜೊತೆಯಲ್ಲಿ ಉಪಹಾರ ಸೇವಿಸಿದರು. ಸಕ್ರಿಯ ರಾಜಕಾರಣದಿಂದ ದೂರವಿರುವ ನಾನು ಸಾಮಾನ್ಯ ಜೆಡಿಎಸ್ ಕಾರ್ಯಕರ್ತ ಸಹ ಅಲ್ಲ, ರಾಜ್ಯ ರಾಜಕೀಯದ ಬಗ್ಗೆ ಮಾತನಾಡುವ ಶಕ್ತಿ ನನಗಿಲ್ಲ. ಕುಟುಂಬದ ಸದಸ್ಯನಾಗಿ ಕಾರ್ಯಕರ್ತರ ಜೊತೆ ತೆರಳಿ ತಂದೆಯ ಪರವಾಗಿ ಪ್ರಚಾರ ನಡೆಸುತ್ತೇನೆ ಎಂದು ಹೆಚ್. ಡಿ ರಮೇಶ್ ತಿಳಿಸಿದ್ದಾರೆ.