ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಮೊದಲ ವರ್ಷದ ಎಂ.ಟೆಕ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಕಾಣೆಯಾಗಿದ್ದಾನೆ. ರಾಜಸ್ತಾನದ ಅನ್ಮೋಲ್ ಗಿಲ್ (22) ನಾಪತ್ತೆಯಾಗಿದ್ದು, ಐಐಎಸ್‌ಸಿ ಭದ್ರತಾ ವಿಭಾಗದ ಅಧಿಕಾರಿ ಜಯರಾಜ್ ನೀಡಿದ ದೂರಿನ ಮೇರೆಗೆ ಯಶವಂತಪುರ ಠಾಣೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿ ಸಂಸ್ಥೆಯ ಆವರಣದೊಳಗಿನ ಹಾಸ್ಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ. ಪ್ರತ್ಯೇಕ ಕೊಠಡಿಯಲ್ಲಿ ಒಬ್ಬನೇ ಉಳಿದುಕೊಂಡಿದ್ದ ಎಂದು ತಿಳಿದು ಬಂದಿದೆ.
ಡಿ.16ರಂದು ಸಂಜೆ ಸ್ನೇಹಿತರು ಕರೆ ಮಾಡಿದಾಗಲೂ ಉತ್ತರಿಸಿರಲಿಲ್ಲ. ಕೊಠಡಿಗೆ ತೆರಳಿ ನೋಡಿದಾಗ ಬೀಗ ಹಾಕಿತ್ತು. ಅನ್ಮೋಲ್ ತಂದೆ ಕರೆ ಮಾಡಿದಾಗಲೂ ಕರೆ ಸ್ವೀಕರಿಸದ ಕಾರಣ ಭದ್ರತಾ ಅಧಿಕಾರಿ ಜಯರಾಜ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಅವರಿಗೆ ರೂಮ್ಗೆ ಹೋಗಿ ನೋಡುವಂತೆ ಸೂಚಿಸಿದ್ದಾರೆ. ತನ್ನ ಬಳಿಯಿದ್ದ ಮತ್ತೊಂದು ಕೀ ತೆಗೆದುಕೊಂಡು ಹೋಗಿ ಒಳನೋಡಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಲ್ಯಾಪ್ ಟಾಪ್ ಹಾಗೂ ಮೊಬೈಲ್ ಚಾರ್ಜ್ ಹಾಕಿ ನಾಪತ್ತೆಯಾಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಜಯರಾಜ್ ತಿಳಿಸಿದ್ದಾರೆ.
ಕ್ಯಾಂಪಸ್ನಿಂದ ಹೊರಹೋದ ಕೊನೆಯ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ವಿದ್ಯಾರ್ಥಿ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಇದನ್ನೂ ಓದಿ: 1 ವರ್ಷದ ಗಂಡು ಮಗು ನಾಪತ್ತೆ: ಹುಡುಕಿ ಕೊಡುವಂತೆ ಅಲೆಮಾರಿ ದಂಪತಿಯ ಅಳಲು - 1 YEAR OLD KID MISSING