ಪ್ರಕೃತಿಯ ಚೆಲುವ ಹೊರಸೂಸಿದ ಗುಲ್ ಮೋಹರ್; ಇಲ್ಲಿದೆ ಸುಂದರ ದೃಶ್ಯ ಕಾವ್ಯ
🎬 Watch Now: Feature Video
ನಾರಿಯರ ಮುಡಿಯನ್ನೂ ಏರದೆ, ದೇವರ ಪೂಜೆಗೂ ಹೋಗದೆ. ವರ್ಷದಲ್ಲಿ ಕೇವಲ ಎರಡು ತಿಂಗಳು ಮಾತ್ರ ಮೈದುಂಬಿ ಅರಳಿ ನಿಂತು ಪ್ರಕೃತಿ ಆರಾಧಕರ ಮನಸು ಸೂರೆಗೊಳಿಸುವ ಹೂವು ಎಂಬುದಿದ್ದರೆ ಅದು ಗುಲ್ ಮೋಹರ್ ಮಾತ್ರ. ಅಲ್ಲದೇ ಬಿಸಿಲ ಝಳಕ್ಕೆ ತತ್ತರಿಸಿದ್ದ ಜನರಿಗೆ ಆಹ್ಲಾದಕರ ವಾತಾವರಣ ನಿರ್ಮಾಣ ಮಾಡಿ, ಬಿಸಿಲ ಛಾಯೆಯನ್ನ ಸಹ ಮೈ ಮೇಲೆ ಬೀಳದ ಹಾಗೆ ಈ ಮರ ಸಮೃದ್ಧವಾಗಿ ಹರಡಿರುತ್ತೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅಲ್ಲೊಂದು ಇಲ್ಲೊಂದು ಕಾಣುವ ಈ ಮರ ಜಿಲ್ಲೆಯ ಕಿಮ್ಸ್ ನಲ್ಲಿ ವಿಶಾಲವಾಗಿ ಹರಡಿಕೊಂಡಿದೆ.