ಚಿಕ್ಕಮಗಳೂರಿನಲ್ಲಿ ಭಾನುವಾರ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ - ಭಾನುವಾರ ಕರ್ಫ್ಯೂ
🎬 Watch Now: Feature Video

ಚಿಕ್ಕಮಗಳೂರು: ನಾಲ್ಕನೇ ಹಂತದ ಲಾಕ್ಡೌನ್ನ ಮೊದಲ ಭಾನುವಾರ ಸರ್ಕಾರ ಕೈಗೊಂಡಿರುವ ಕರ್ಫ್ಯೂಗೆ ಚಿಕ್ಕಮಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಗರದ ಹನುಮಂತಪ್ಪ ವೃತ್ತ ಹಾಗೂ ನಗರದ ಪ್ರಮುಖ ರಸ್ತೆಯಾದ ಎಂಜಿ ರಸ್ತೆ ಸಂಪೂರ್ಣ ಲಾಕ್ಡೌನ್ ಆಗಿದ್ದು, ಜನರಿಲ್ಲದೆ ಬಿಕೋ ಎನ್ನುತ್ತಿದೆ. ಅನಗತ್ಯವಾಗಿ ರಸ್ತೆಗಿಳಿಯುವ ಜನರನ್ನು ಪೊಲೀಸರು ಪ್ರಶ್ನೆ ಮಾಡುತ್ತಿದ್ದು, ಅಗತ್ಯ ಸೇವೆಗಳು ಮಾತ್ರ ಎಂದಿನಂತೆ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಕುರಿತು ಹನುಮಂತಪ್ಪ ವೃತ್ತದಲ್ಲಿ, ನಡೆಸಿದ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.