ವಿಜಯಪುರ ಜಿಲ್ಲೆಯಲ್ಲಿ ಮಂದಗತಿ ಮತದಾನ - ಗ್ರಾಮ ಪಂಚಾಯಿತಿ ಚುನಾವಣೆ ಮೊದಲ ಹಂತದ ಮತದಾನ
🎬 Watch Now: Feature Video
ವಿಜಯಪುರ ಜಿಲ್ಲೆಯ ಎಂಟು ತಾಲೂಕುಗಳ 111 ಗ್ರಾಮ ಪಂಚಾಯಿತಿಯಗಳ ಪೈಕಿ 2,126 ಸದಸ್ಯ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಚಳಿಯ ಕಾರಣ ಬೆಳಗ್ಗೆ ಮತದಾನ ಮಂದಗತಿಯಿಂದ ಸಾಗಿದ್ದು, ಬಿಸಿಲು ಏರುತ್ತಿದ್ದಂತೆ ಮತದಾರರು ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸುತ್ತಿದ್ದಾರೆ. ಇದೇ ವೇಳೆ ಜನರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಿರುವುದು ಕಂಡುಬರುತ್ತಿದೆ. ವಿಜಯಪುರ ನಗರದ ಐನಾಪುರ ತಾಂಡಾದ ಸರ್ಕಾರಿ ಶಾಲೆ ಬಳಿಯಿಂದ ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.