ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ... ಕೃಷ್ಣ ನಗರಿ ಖಾಲಿ ಖಾಲಿ - ಜನತಾ ಕರ್ಫ್ಯೂ
🎬 Watch Now: Feature Video
ಉಡುಪಿ: ದೇಶಾದ್ಯಂತ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲೂ ಕೊರೊನಾ ವಿರುದ್ಧದ ಹೋರಾಟಕ್ಕೆ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಉಡುಪಿಯ ರೆಸಿಡೆನ್ಸಿಯಲ್ ಏರಿಯಾಗಳು ಸಂಪೂರ್ಣ ಸ್ತಬ್ಧವಾಗಿವೆ. ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿದ್ದು, ಬಸ್ ನಿಲ್ದಾಣಗಳು ಖಾಲಿ ಹೊಡಿತಿವೆ. ಒಟ್ಟಾರೆ ಉಡುಪಿ ಸಂಪೂರ್ಣ ಸ್ತಬ್ಧವಾಗಿದೆ.