ಸಂಡೇ ಲಾಕ್ಡೌನ್: ಹಾವೇರಿಯಲ್ಲಿ ಅನಗತ್ಯವಾಗಿ ಓಡಾಡೋರಿಗೆ ಬಿತ್ತು ದಂಡ - Haveri Good response News
🎬 Watch Now: Feature Video
ಸಂಡೇ ಲಾಕ್ಡೌನ್ ಹಿನ್ನೆಲೆ ಹಾವೇರಿಯಲ್ಲಿ ಬೈಕ್, ಕಾರಿನಲ್ಲಿ ಬೇಕಾಬಿಟ್ಟಿ ಓಡಾಡೋರಿಗೆ ಪೊಲೀಸರು ದಂಡ ಹಾಕಿದ್ದಾರೆ. ಲಾಕ್ಡೌನ್ ಇದ್ದರೂ ಅನಗತ್ಯವಾಗಿ ಹೊರಗೆ ಓಡಾಡುತ್ತಿರುವ ಕೆಲವರಿಗೆ ದಂಡ ಹಾಕಿ ಮನೆಯಿಂದ ಹೊರಗೆ ಓಡಾಡದಂತೆ ಹೇಳಿ ಪೊಲೀಸರು ಕಳಿಸುತ್ತಿದ್ದಾರೆ. ಮಾಸ್ಕ್ ಇಲ್ಲದೆ ಓಡಾಡ್ತಿದ್ದ ಬೈಕ್ ಸವಾರ ಪೊಲೀಸರನ್ನ ಕಂಡು ಬೈಕ್ ಕ್ಲೀನ್ ಮಾಡೋ ಬಟ್ಟೆಯಿಂದ ಮುಖ ಮುಚ್ಚಿಕೊಂಡಿದ್ದಾನೆ. ಹಾಗೇಯೆ ಲಾಕ್ಡೌನ್ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಅಲ್ಲಲ್ಲಿ ಸ್ವಲ್ಪ ಜನರ ಓಡಾಟ ಬಿಟ್ಟರೆ ಅಂಗಡಿ ಮುಂಗಟ್ಟುಗಳು, ಬಸ್ ಸಂಚಾರ, ಖಾಸಗಿ ವಾಹನಗಳು, ಆಟೋ ರಿಕ್ಷಾಗಳ ಓಡಾಟ ಸಂಪೂರ್ಣ ಸ್ಥಗಿತವಾಗಿತ್ತು.