''ಆಜಾದಿ ಕಾ ಅಮೃತ ಮಹೋತ್ಸವ'':ವಿಶ್ವವಿಖ್ಯಾತ ಗೋಳಗುಮ್ಮಟಕ್ಕೆ ತ್ರಿವರ್ಣಗಳ ದೀಪಾಲಂಕಾರದ ಮೆರುಗು - ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-13416680-thumbnail-3x2-vjp.jpg)
''ಆಜಾದಿ ಕಾ ಅಮೃತ ಮಹೋತ್ಸವ'' ಹಾಗೂ ದೇಶದಲ್ಲಿ ಕೋವಿಡ್ ಮೊದಲ ಲಸಿಕೆ ನೀಡುವಲ್ಲಿ 100 ಕೋಟಿ ಲಸಿಕಾಕರಣ ಸಾಧನೆ ಹಿನ್ನೆಲೆಯಲ್ಲಿ ವಿಜಯಪುರದ ಐತಿಹಾಸಿಕ ಸ್ಮಾರಕ ವಿಶ್ವವಿಖ್ಯಾತ ಗೋಲಗುಂಬಜ್ಗೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಆಕಾಶದತ್ತ ತ್ರಿವರ್ಣ ಬಲೂನ್ ಬಿಡುವ ಮೂಲಕ ಸಂಭ್ರಮಾಚರಣೆಗೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಚಾಲನೆ ನೀಡಿದರು. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ವ್ಯಾಪ್ತಿಯ ನೂರು ಸ್ಮಾರಕಗಳನ್ನು ತ್ರಿವರ್ಣ ದೀಪ ಬೆಳಗಿಸಲು ಆಯ್ಕೆ ಮಾಡಿತ್ತು.ಈ ಪೈಕಿ ವಿಜಯಪುರದ ವಿಶ್ವವಿಖ್ಯಾತ ಗೋಲಗುಂಬಜ್ ಅನ್ನು ಸಹ ಆಯ್ಕೆ ಮಾಡಲಾಗಿತ್ತು. ಇದೀಗ ತ್ರಿವರ್ಣದಿಂದ ಆಕರ್ಷಣೀಯವಾಗಿ ಕಂಗೊಳಿಸುತ್ತಿರುವ ಗೋಳಗುಮ್ಮಟ ಎಲ್ಲರ ಕಣ್ಮನ ಸೆಳೆಯುತ್ತಿದೆ.