ಶಿವಮೊಗ್ಗದಲ್ಲಿ ಗಣೇಶ ಮೂರ್ತಿಗಳ ಮಾರಾಟ ಡಲ್ - Ganesha statues sale is dull
🎬 Watch Now: Feature Video

ಗಣೇಶ ಹಬ್ಬ ಬಂತೆಂದರೆ ಸಾಕು, ದೊಡ್ಡ ಗಾತ್ರದ ಗಣೇಶ ಮೂರ್ತಿಗಳಿಗೆ ಭಾರಿ ಬೇಡಿಕೆ ಇರ್ತಿತ್ತು. ಆದರೆ ಈ ಬಾರಿಯ ಹಬ್ಬಕ್ಕೆ ಕೊರೊನಾ ಕರಿನೆರಳು ಬಿದ್ದಿರುವುದರಿಂದ ಮೂರ್ತಿಗಳ ಮಾರಾಟದಲ್ಲಿ ಕುಸಿತವಾಗಿದೆ. ಒಂದೆಡೆ ಪ್ರವಾಹ ಮತ್ತೊಂದೆಡೆ, ಕೊರೊನಾದಿಂದಾಗಿ ಗಣಪತಿ ಕಲಾವಿದರ ಬದುಕು ಬೀದಿಗೆ ಬಂದಿದೆ. ಸರ್ಕಾರದಿಂದ ಸಹ ಯಾವುದೇ ನೆರವು ಸಿಕ್ಕಿಲ್ಲ. ಹಬ್ಬಕೆಂದು ತಯಾರಿಸಿದ ಮೂರ್ತಿಗಳ ಮಾರಾಟವೂ ಅಷ್ಟೊಂದು ಪ್ರಮಾಣದಲ್ಲಿ ಆಗುತ್ತಿಲ್ಲ. ಸರ್ಕಾರ ನಾಲ್ಕು ಅಡಿಗಿಂತ ದೊಡ್ಡ ಗಣೇಶ ಮೂರ್ತಿ ಕೂರಿಸುವಂತಿಲ್ಲ ಎಂದು ಆದೇಶ ಹೊರಡಿಸಿರುವುದರಿಂದ ದೊಡ್ಡ ಗಾತ್ರದ ಗಣೇಶ ಮೂರ್ತಿಗಳ ಮಾರಾಟವಾಗುತ್ತಿಲ್ಲ. ಜನರು ಕೊರೊನಾದಿಂದಾಗಿ ಕೊಂಡುಕೊಳ್ಳಲು ಬರುತ್ತಿಲ್ಲ. ಕಳೆದ ಭಾರಿಯಷ್ಟು ವ್ಯಾಪಾರ ಇಲ್ಲ ಎನ್ನುತ್ತಾರೆ ಗಣಪತಿ ಮೂರ್ತಿ ತಯಾರಕರು.