ಸ್ನೇಹಿತರ ದಿನ ಮೂಕ ಪ್ರಾಣಿಗಳ ಹಸಿವು ನೀಗಿಸಿದ ಯುವಕ! - distributed food to animals
🎬 Watch Now: Feature Video
ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಅನೂಪ್ ಶಿವಾನಂದ್ ಎಂಬುವರು ಇಂದು ಸ್ನೇಹಿತರ ದಿನಾಚರಣೆ ಅಂಗವಾಗಿ ಹಂಪಿಯ ಕೋತಿಗಳಿಗೆ ಮತ್ತು ದನ-ಕರುಗಳಿಗೆ 200 ಬಾಳೆಹಣ್ಣು, ಬ್ರೆಡ್, ಒಂದು ಬಾಕ್ಸ್ ಬಿಸ್ಕೇಟ್ ವಿತರಿಸಿದ್ದಾರೆ. ಮುಂದಿನ ವಾರವೂ ಇದೇ ರೀತಿ ವಿತರಣೆ ಮಾಡುತ್ತೇನೆ ಎಂದು ಅನೂಪ್ ಶಿವಾನಂದ್ ತಿಳಿಸಿದ್ದಾರೆ. ಕೊರೊನಾ ಹಿನ್ನೆಲೆ ಹಂಪಿ ಪ್ರವಾಸಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ, ನೂರಾರು ಕೋತಿಗಳು, ದನಕರುಗಳು ಹಸಿವಿನಿಂದಿವೆ.