ತಂದೆಯ ನೆನಪಿನಲ್ಲಿ ನಿರಾಶ್ರಿತರಿಗೆ ಉಚಿತ 'ಕ್ಷೌರ ಸೇವೆ' ಮಾಡಿಸಿದ ಮಗ.. - Free Haircut Service
🎬 Watch Now: Feature Video
ಶಿವಮೊಗ್ಗ: ಭದ್ರಾವತಿಯ ಮೋಸಸ್ ಎಂಬುವರು ತಮ್ಮ ತಂದೆಯ ನೆನಪಿಗಾಗಿ ನಿರಾಶ್ರಿತರಿಗೆ ಉಚಿತವಾಗಿ ಕ್ಷೌರ ಸೇವೆ ಮಾಡಿದ್ದಾರೆ. ಮೋಸಸ್ ಅವರ ತಂದೆ ರೋಸಯ್ಯನವರು ಬಡತನದಲ್ಲಿದ್ದರೂ ಕೂಡ ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಬಡವರಿಗೆ, ನಿರಾಶ್ರಿತರಿಗೆ ದಾನ ಮಾಡುತ್ತಿದ್ದರು. ಹಾಗಾಗಿ ತಮ್ಮ ತಂದೆಯ ನೆನಪಿಗಾಗಿ ಪುತ್ರ ಮೋಸಸ್ ಇಂದು ಭದ್ರಾವತಿಯ ನ್ಯೂ ಟೌನ್ ತಮಿಳು ಶಾಲೆಯ ಬಳಿ ನಿರಾಶ್ರಿತರಿಗೆ ಉಚಿತ ಕ್ಷೌರ ಸೇವೆ ಮಾಡಿ ಸಮಾಜ ಸೇವೆ ಸಲ್ಲಿಸಿದ್ದಾರೆ. ಮೋಸಸ್ ಅವರ ಸಮಾಜ ಸೇವಾ ಕಾರ್ಯಕ್ಕೆ ಪೊಲೀಸ್ ಉಮೇಶ್ ಅವರ ಸ್ನೇಹ ಜೀವಿ ಬಳಗ ಹಾಗೂ ಭದ್ರಾವತಿ ಸವಿತ ಸಮಾಜ ಸಾಥ್ ನೀಡಿದರು.