ಅಪ್ಪು ನೆನೆದು "ಬೆಟ್ಟದ ಹೂ" ಸಿನಿಮಾ ನೋಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು.. - ಬೆಟ್ಟದ ಹೂ ಸಿನಿಮಾ ನೋಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-13503293-thumbnail-3x2-hdd.jpg)
ನಿನ್ನೆ ಹೃದಯಾಘಾತದಿಂದ ನಟ ಪುನೀತ್ ರಾಜ್ಕುಮಾರ್ ನಿಧನರಾಗಿದ್ದಾರೆ. ಕುಟುಂಬಸ್ಥರು, ಅಪಾರ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ನಟ-ನಟಿಯರು ಸಹ ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ಅವರು ಕೂಡ ನಿನ್ನೆ ಸಂತಾಪ ಸೂಚಿಸಿದ್ದರು. ದೇವೇಗೌಡರು ಇಂದು ಅವರ ಮನೆಯಲ್ಲಿ ಪುನೀತ್ ರಾಜ್ ಕುಮಾರ್ ನಟಿಸ್ಸಿದ್ದ ಬೆಟ್ಟದ ಹೂ ಸಿನಿಮಾವನ್ನು ನೋಡಿದರು. ಈ ಸಿನಿಮಾಕ್ಕೆ ಪುನೀತ್ ರಾಜ್ಕುಮಾರ್ಗೆ ರಾಷ್ಟ್ರ ಪ್ರಶಸ್ತಿ ದೊರಕಿತ್ತು.