ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿದ ಮಾಜಿ ಸಚಿವ ಎ.ಮಂಜು ಅಭಿಮಾನಿ ಬಳಗ - ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯ
🎬 Watch Now: Feature Video
ಹಾಸನ: ಮಾಜಿ ಸಚಿವ ಎ.ಮಂಜು ಅಭಿಮಾನಿ ಬಳಗದ ಸದಸ್ಯರು ಶುಕ್ರವಾರ ಪಟ್ಟಣದ ಕುವೆಂಪು ಉದ್ಯಾನವನದಲ್ಲಿ ಎ.ಮಂಜು ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಅರಕಲಗೂಡು ಅಭಿಮಾನಿ ಬಳಗದ ಸದಸ್ಯರು ಉದ್ಯಾನವನದಲ್ಲಿ ಒಂದು ಗಂಟೆ ಕಾಲ ಸ್ವಚ್ಛತಾ ಕಾರ್ಯ ಮಾಡಿ ಬಳಿಕ ಹತ್ತಾರು ಗಿಡಗಳನ್ನು ನೆಟ್ಟಿದ್ದಾರೆ. ಇದಾದ ಬಳಿಕ ದೊಡ್ಡಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಎ.ಮಂಜು ಅವರು ದೇವರಿಗೆ ಪೂಜೆ ಸಲ್ಲಿಸಿ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.