ನೆರೆದವರ ಬಾಯಲ್ಲಿ ನೀರೂರಿಸಿದ ಕದಂಬೋತ್ಸವದ ಆಹಾರ ಮೇಳ - Cattel fair in karwar
🎬 Watch Now: Feature Video
ಕಾರವಾರ: ಕದಂಬೋತ್ಸವದ ಅಂಗವಾಗಿ ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ಸಿದ್ದಗೊಂಡ ಬಗೆ ಬಗೆಯ ಆಹಾರ ಪದಾರ್ಥಗಳು ನೆರೆದವರ ಬಾಯಲ್ಲಿ ನೀರೂರಿಸುವಂತೆ ಮಾಡಿತ್ತು. ಸುಮಾರು 30ಕ್ಕೂ ಅಧಿಕ ಸ್ಪರ್ಧಿಗಳು ಪಾಕಶಾಲೆಯಲ್ಲಿ ತಮ್ಮ ಕೈ ರುಚಿಯನ್ನು ಸ್ಪರ್ಧೆಗೊಡ್ಡಿದ್ದರು. ಮಣ್ಣಿ, ಹೋಳಿಗೆ, ಕಡಬು, ಕರಡಿ ಸೊಪ್ಪಿನ ಚಟ್ನಿ, ವೆಜ್ ಬಿರಿಯಾನಿ, ಪಾಯಸ ಸೇರಿದಂತೆ ನೂರಕ್ಕೂ ಹೆಚ್ಚು ಬಗೆಯ ತಿಂಡಿಗಳನ್ನು ಸಿದ್ದಪಡಿಸಿದ್ದರು. ಆಹಾರ ಪದಾರ್ಥಗಳನ್ನು ಮೇಳದಲ್ಲಿ ತಯಾರಿಸಿ ಪ್ರದರ್ಶನಕ್ಕೆ ಇಡುವುದರ ಜೊತೆಗೆ ಖಾದ್ಯಗಳನ್ನು ಸವಿಯಲು ಕೂಡ ಅವಕಾಶ ಕಲ್ಪಿಸಲಾಗಿತ್ತು. ಉತ್ತಮವಾಗಿ ಆಹಾರ ತಯಾರಿಸಿದವರಿಗೆ ಉತ್ಸವದಲ್ಲಿ ಬಹುಮಾನವನ್ನು ವಿತರಿಸಲಾಯಿತು. ಇದರ ಜೊತೆಗೆ ಪಶುಸಂಗೋಪನಾ ಇಲಾಖೆಯಿಂದ ಜಾನುವಾರುಗಳ ಪ್ರದರ್ಶನವೂ ನಡೆಯಿತು.