ನೆರೆ ಪರಿಹಾರಕ್ಕೆ ಆಗ್ರಹ: ಡಿಸಿ ಕಚೇರಿ ಮುಂದೆಯೇ ರೊಟ್ಟಿ ತಿಂದು ರೈತರ ಪ್ರತಿಭಟನೆ - ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ನೆರೆ ಸಂತ್ರಸ್ತರ ಪ್ರತಿಭಟನೆ
🎬 Watch Now: Feature Video
ಹಾವೇರಿ: ಸೂಕ್ತ ಪರಿಹಾರ ಮತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ನೆರೆ ಸಂತ್ರಸ್ತರು ಮತ್ತು ರೈತರು ಪ್ರತಿಭಟನೆ ನಡೆಸಿದರು. ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರೈತರು ಸರ್ಕಾರ ನೆರೆ ಸಂತ್ರಸ್ತರನ್ನು ಕಡೆಗಣಿಸಿದೆ ಎಂದು ಆರೋಪಿಸಿದರು. ನೆರೆ ಸಂತ್ರಸ್ತರಿಗೆ ಈ ಕೂಡಲೇ ಪರಿಹಾರ ಹಣ ವಿತರಿಸಬೇಕೆಂದು ಒತ್ತಾಯಿಸಿದರು. ಇದೇ ವೇಳೆ ತಮ್ಮ ತಮ್ಮ ಮನೆಗಳಿಂದ ತಂದಿದ್ದ ಜೋಳದ ರೊಟ್ಟಿಗಳನ್ನು ಜಿಲ್ಲಾಡಳಿತ ಕಚೇರಿ ಮುಂದೆಯೇ ತಿಂದು ಪ್ರತಿಭಟನೆ ಮುಂದುವರೆಸಿದರು.