ಯಾದಗಿರಿ: ಭೀಮಾ ನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ
🎬 Watch Now: Feature Video
ಯಾದಗಿರಿ ಜಿಲ್ಲೆಯ ಭೀಮಾ ತೀರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಸನ್ನತಿ ಅಣೆಕಟ್ಟೆಯಿಂದ ಭೀಮಾ ನದಿಗೆ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದ್ದು, ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಉಕ್ಕಿ ಹರಿಯುತ್ತಿರುವ ಭೀಮೆ ನೀರು ನದಿ ಪಾತ್ರದ ಗ್ರಾಮಗಳಿಗೆ ನುಗ್ಗುವ ಮೂಲಕ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಯಾದಗಿರಿ ತಾಲೂಕಿನ ಭೀಮಾ ನದಿ ಪಕ್ಕದಲ್ಲಿರುವ ನಾಯ್ಕಲ್ ಗ್ರಾಮದಲ್ಲಿ ಹಲವು ಮನೆಗಳಿಗೆ ನದಿ ನೀರು ನುಗ್ಗಿದ್ದು, ಗ್ರಾಮಸ್ಥರು ಕಷ್ಟ ಅನುಭವಿಸುವಂತಾದರೆ, ಸಾವಿರಾರು ಎಕರೆಯಲ್ಲಿ ರೈತರು ಬೆಳೆದ ಹತ್ತಿ, ಬತ್ತ, ತೊಗರಿ ನೀರಿಲ್ಲಿ ಜಲಾವೃತಗೊಳ್ಳುವ ಮೂಲಕ ರೈತ ಬೆಳೆ ನಷ್ಟ ಅನುಭವಿಸುವಂತಾಗಿದೆ.