ಮಂಡ್ಯದಲ್ಲಿ ಅಪಾಯಕಾರಿ ವಿದ್ಯುತ್ ಲೈನ್ ಬಳಸಿ ಮೀನು ಶಿಕಾರಿ... ರೈತರಲ್ಲಿ ಹೆಚ್ಚಿದ ಆತಂಕ

🎬 Watch Now: Feature Video

thumbnail
ಮಂಡ್ಯ: ಮೀನು ಶಿಕಾರಿಗೆ ಅಪಾಯಕಾರಿ ವಿದ್ಯುತ್ ಲೈನ್ ಬಳಸಿ ಬೇಟೆಯಾಡುತ್ತಿರುವ ಘಟನೆ ಶ್ರೀರಂಗಪಟ್ಟ ತಾಲೂಕಿನ ಮಂಡ್ಯ ಕೊಪ್ಪಲು ಗ್ರಾಮದ ಬಳಿಯ ಕಾವೇರಿ ನದಿ ತೀರದಲ್ಲಿ ಪತ್ತೆಯಾಗಿದೆ. ಕಾವೇರಿ ನದಿಯ ಸಮೀಪ ರೈತರ ಜಮೀನಿಗೆ ಹಾದು ಹೋಗಿರುವ ವಿದ್ಯುತ್ ಮಾರ್ಗಕ್ಕೆ ವೈರ್​ ಎಳೆದು, ಅದನ್ನು ನದಿಗೆ ಇಳಿಸಿ ಅಪಾಯಕಾರಿಯಾಗಿ ಮೀನುಗಳನ್ನು ಬೇಟೆಯಾಡಲಾಗುತ್ತಿದೆ. ಹಲವು ದಿನಗಳಿಂದ ಈ ರೀತಿಯ ಬೇಟೆ ನಡೆಯುತ್ತಿದ್ದು, ಸ್ಥಳೀಯ ರೈತರು ಬೆಚ್ಚಿಬಿದ್ದಿದ್ದಾರೆ. ಏನಾದರು ಗೊತ್ತಿಲ್ಲದೆ ನದಿಗಿಳಿದರೆ ಸಾವು ಗ್ಯಾರಂಟಿ ಎಂಬ ಆತಂಕದಲ್ಲಿದ್ದಾರೆ ರೈತರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.