ಕುಡಿದ ಮತ್ತಿನಲ್ಲಿ ಬೌನ್ಸ್ ಬೈಕ್ಗೆ ಬೆಂಕಿ ಇಟ್ಟ ರೌಡಿಶೀಟರ್ಸ್... ಸಿಸಿಟಿವಿಯಲ್ಲಿ ಕೃತ್ಯ ಸೆರೆ - ಕುಡಿದ ಮತ್ತಿನಲ್ಲಿ ಬೌನ್ಸ್ ಬೈಕ್ಗೆ ಬೆಂಕಿ ಇಟ್ಟ ಕಿರಾತಕರು
🎬 Watch Now: Feature Video
ಕುಡಿದ ಮತ್ತಿನಲ್ಲಿ ರೌಡಿಶೀಟರ್ಸ್ಗಳು ಬೌನ್ಸ್ ಬೈಕ್ಗೆ ಬೆಂಕಿ ಹಾಕಿರುವ ಘಟನೆ ಬೆಂಗಳೂರಿನ ಯಲಹಂಕದ ಕೋಗಿಲು ಕ್ರಾಸ್ ಬಳಿ ನಡೆದಿದೆ.
ನಿರ್ಮಾಣ ಹಂತದ ಕಟ್ಟಡದ ಬಳಿ ಬೌನ್ಸ್ ಬೈಕ್ ನಿಲ್ಲಿಸಲಾಗಿತ್ತು. ಇದೇ ವೇಳೆ ರೌಡಿಗಳು ಬೈಕ್ಗೆ ಬೆಂಕಿ ಹಚ್ಚಿದ್ದಾರೆ. ಇನ್ನು ಬೆಂಕಿ ಹಾಕಿದ ತಕ್ಷಣ ಬೌನ್ಸ್ ಗಾಡಿ ಧಗಧಗ ಹೊತ್ತಿ ಉರಿದಿದೆ. ಈ ಕೃತ್ಯ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದ್ದು, ಸಿಸಿಟಿವಿಯನ್ನ ನೋಡ್ತಿದ್ದಂತೆ ಇನ್ನೊಂದು ಮಾರ್ಗದಲ್ಲಿ ಪರಾರಿಯಾಗಿದ್ದಾರೆ. ಸದ್ಯ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.