8 ರೂಪಾಯಿಗೆ ಕೆ.ಜಿ. ಈರುಳ್ಳಿ! ರೈತನ ಬಳಿ ಖರೀದಿಗೆ ಮುಗಿಬಿದ್ದ ಜನ
🎬 Watch Now: Feature Video
ದಿನೇ ದಿನೇ ಈರುಳ್ಳಿ ಬೆಲೆ ಏರಿಕೆಯಾಗುತ್ತಾ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಆದ್ರೆ ಎಪಿಎಂಸಿಯಲ್ಲಿ ಈರುಳ್ಳಿ ಕೊಳೆತು ನಾರುವ ಸ್ಥಿತಿಗೆ ತಲುಪುತ್ತಿವೆ. ಇದೀಗ ಪ್ರತಿ ಕೆಜಿಗೆ 8 ರೂಪಾಯಿಯಂತೆ ರೈತನೇ ನಿಂತು ಈರುಳ್ಳಿ ಮಾರಿದ್ದಾನೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 50ರಿಂದ 60ರೂಪಾಯಿ ಇದ್ದರೂ ರೈತನಿಗೆ ಮಾತ್ರ ಅಷ್ಟೋ ಇಷ್ಟೋ ಕೊಟ್ಟು ಮಧ್ಯವರ್ತಿಗಳು ಲಾಭ ಪಡೆದುಕೊಳ್ಳುತ್ತಾರೆ. ಇತ್ತ ಅಥಣಿಯಲ್ಲಿ ಅಕಾಲಿಕ ಮಳೆಯಿಂದಾಗಿ ಈರುಳ್ಳಿಯ ಗುಣಮಟ್ಟ ಹಾಳಾಗಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ. ಹೀಗಾಗಿ ಜಮೀನು, ಮನೆಯಲ್ಲಿದ್ದು ಕೆಡುವ ಬದಲು ಕೈಗೆ ಸಿಕ್ಕಷ್ಟು ಹಣಕ್ಕೆ ಮಾರಿದರೆ ಮಾಡಿದ ಖರ್ಚಾದರೂ ಸಿಗುತ್ತೆ ಅಂತಾ ಅಥಣಿ ರೈತ ಮಾಳೆಪ್ಪ ಎಂಬಾತ ಗ್ರಾಹಕರಿಗೆ 1ಕೆಜಿ ಈರುಳ್ಳಿಯನ್ನು 8 ರೂಪಾಯಿಗೆ ಮಾರಿದ್ದು, ಗ್ರಾಹಕರು ಖರೀದಿಗೆ ಮುಗಿಬೀಳುತ್ತಿದ್ದ ದೃಶ್ಯ ಕಂಡುಬಂತು.