ETV Bharat / state

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯಕ್ಕೆ ಸೂರ್ಯ 'ಶಕ್ತಿ', ₹2.81 ಕೋಟಿ ಉಳಿತಾಯ - SOUTH WESTERN RAILWAY ZONE

ನೈರುತ್ಯ ರೈಲ್ವೆ ವಿವಿಧೆಡೆ ಅಳವಡಿಸಿರುವ ಸೌರಫಲಕಗಳಿಂದ 57 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು, ಇದರಿಂದಾಗಿ 2.81 ಕೋಟಿ ರೂಪಾಯಿ ಉಳಿತಾಯವಾಗಿದೆ. ಈ ಕುರಿತು ಈಟಿವಿ ಭಾರತ್ ವರದಿಗಾರ ಹೆಚ್‌.ಬಿ.ಗಡ್ಡದ ನೀಡಿರುವ ವಿಶೇಷ ವರದಿ ಇಲ್ಲಿದೆ.

ನೈಋತ್ಯ ರೈಲ್ವೆ ವಲಯಕ್ಕೆ ಸೂರ್ಯ ಶಕ್ತಿಯೇ ಸೋಪಾನ
ನೈಋತ್ಯ ರೈಲ್ವೆ ವಲಯಕ್ಕೆ ಸೂರ್ಯ ಶಕ್ತಿಯೇ ಸೋಪಾನ (ETV Bharat)
author img

By ETV Bharat Karnataka Team

Published : Feb 19, 2025, 8:26 PM IST

ಹುಬ್ಬಳ್ಳಿ: ಸೌರಶಕ್ತಿ ಬಳಕೆಯಲ್ಲಿ ನೈಋತ್ಯ ರೈಲ್ವೆ ವಲಯ ಸ್ವಾವಲಂಬಿಯಾಗುವತ್ತ ಹೆಜ್ಜೆ ಇಟ್ಟಿದೆ. ನವೀಕರಿಸಬಹುದಾದ ಇಂಧನದ ಬಳಕೆಯಲ್ಲಿ ಮಹತ್ವದ ಪ್ರಗತಿ ಸಾಗಿಸುತ್ತಿದ್ದು, 2030ರೊಳಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವ ಗುರಿ ಹೊಂದಿದೆ.

ನೈಋತ್ಯ ರೈಲ್ವೆಯ ನಿಲ್ದಾಣಗಳು, ಸೇವಾ ಕಟ್ಟಡಗಳು, ಲೆವೆಲ್ ಕ್ರಾಸಿಂಗ್‌ಗಳು, ಬೀದಿ ದೀಪಗಳು ಮತ್ತು ಪಂಪ್‌ಗಳು ಸೇರಿದಂತೆ ವಿವಿಧ ಮೂಲಸೌಕರ್ಯಗಳಲ್ಲಿ ಸೌರ ಫಲಕಗಳನ್ನು ವ್ಯಾಪಕವಾಗಿ ಅಳವಡಿಸುವ ಮೂಲಕ, ತನ್ನ ಇಂಧನ ಅಗತ್ಯಗಳನ್ನು ಸುಸ್ಥಿರವಾಗಿ ಪೂರೈಸುತ್ತಿದೆ. ಜೊತೆಗೆ, ಇತರೆ ವಿದ್ಯುತ್ ಖರೀದಿಯ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ.

ನೈಋತ್ಯ ರೈಲ್ವೆ ವಲಯಕ್ಕೆ 2.81 ಕೋಟಿ ರೂ ಉಳಿತಾಯ (ETV Bharat)

ನೈಋತ್ಯ ರೈಲ್ವೆ ವಲಯದಲ್ಲಿ ಅಳವಡಿಸಲಾದ ಸೋಲಾರ್​ ಫಲಕಗಳ ಸಾಮರ್ಥ್ಯವು 6712 kwp ಆಗಿದ್ದು, ಇದರಲ್ಲಿ 2160 KWp ನಿಲ್ದಾಣಗಳಿಂದ, 4280 kWp ಸೇವಾ ಕಟ್ಟಡಗಳಿಂದ, 141 kWp ಲೆವೆಲ್ ಕ್ರಾಸಿಂಗ್ ಗೇಟ್‌ಗಳಿಂದ ಮತ್ತು 131 kWp ಸೌರ ಪಂಪ್​ಗಳಿಂದ ಪಡೆಯಲಾಗುತ್ತಿದೆ.

2024-25ರ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆಯು ಒಂದು ನಿಲ್ದಾಣ ಮತ್ತು 9 ಸೇವಾ ಕಟ್ಟಡಗಳಲ್ಲಿ ಸೋಲಾರ್​ ಅಳವಡಿಕೆಯಿಂದ ತನ್ನ ಸೌರ ಸಾಮರ್ಥ್ಯವನ್ನು 382.65 kWp ಹೆಚ್ಚಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ, ನೈಋತ್ಯ ರೈಲ್ವೆಯು ಸೌರ ಫಲಕ ಸ್ಥಾಪನೆಯಿಂದ ಒಟ್ಟು ಸಾಮರ್ಥ್ಯ 6.7 ಮೆಗಾವಾಟ್‌ಗೆ ವೃದ್ಧಿಸಿದೆ. ಈ ಸೌರ ಫಲಕ ಅಳವಡಿಕೆ ಸುಮಾರು 57 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಿದ್ದು, ಅಂದಾಜು 2.81 ಕೋಟಿ ಉಳಿತಾಯವಾಗಿದೆ.

ಈ‌ ಕುರಿತು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ‌.ಮಂಜುನಾಥ ಕನಮಡಿ 'ಈಟಿವಿ ಭಾರತ್​' ಜೊತೆ ಮಾತನಾಡಿ, "ನೈಋತ್ಯ ರೈಲ್ವೆ ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ರೈಲು ನಿಲ್ದಾಣ, ಸೇವಾ ಕಟ್ಟಡ, ಎಲ್​ಸಿ ಗೇಟ್​ಗಳು ಸೇರಿದಂತೆ ಎಲ್ಲಿ ವಿದ್ಯುತ್ ಅವಶ್ಯಕೆತೆ ಇದೆ. ಅಲ್ಲಿ ಸೋಲಾರ್​ ಪ್ಯಾನೆಲ್​ಗಳನ್ನು ಅಳವಡಿಕೆಗೆ ಒತ್ತು ಕೊಡಲಾಗಿದೆ. ನಮ್ಮ ಸಾಮರ್ಥ್ಯ 6.7 ಮೆಗ್ಯಾವ್ಯಾಟ್ ವೃದ್ಧಿಯಾಗಿದೆ. ಒಟ್ಟು 57 ಲಕ್ಷ ಯೂನಿಟ್ ಸೌರ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಿಂದ ನೈಋತ್ಯ ವಲಯ ಪ್ರಸಕ್ತ ವರ್ಷ ಇಲ್ಲಿಯವರೆಗೆ 2.81 ಕೋಟಿ ರೂ. ಗಳಷ್ಟು ಉಳಿತಾಯ ಮಾಡಿದೆ" ಎಂದರು.

"ನೈಋತ್ಯ ರೈಲ್ವೆಯು 146 ನಿಲ್ದಾಣಗಳಲ್ಲಿ ಪ್ರಮುಖವಾಗಿ ಹುಬ್ಬಳ್ಳಿ, ಕೆಎಸ್‌ಆರ್ ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾವಿ, ಹೊಸಪೇಟೆ, ಗದಗ ಮತ್ತು ಬಳ್ಳಾರಿ ನಿಲ್ದಾಣಗಳಲ್ಲಿ ಸೌರ ಮೇಲ್ಛಾವಣಿ ಫಲಕಗಳನ್ನು ಅಳವಡಿಸಿದೆ. ಇನ್ನು 27 ಸೇವಾ ಕಟ್ಟಡಗಳಾದ ರೈಲ್ವೆ ಸೌಧ, ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಗಳು (ಹುಬ್ಬಳ್ಳಿ ಮತ್ತು ಬೆಂಗಳೂರು), ಹಳೆಯ ಪ್ರಧಾನ ವ್ಯವಸ್ಥಾಪಕರ ಕಚೇರಿ (ಹುಬ್ಬಳ್ಳಿ), ಪಾರ್ಸೆಲ್ ಕಚೇರಿ (ಬೆಂಗಳೂರು), ರೈಲ್ವೆ ಆಸ್ಪತ್ರೆ (ಬೆಂಗಳೂರು), ಮತ್ತು ಭಾರತೀಯ ರೈಲ್ವೆ ವಿಪತ್ತು ನಿರ್ವಹಣಾ ಸಂಸ್ಥೆ (ಹೆಜ್ಜಾಲ) ಸೇರಿದಂತೆ ಇತರೆ ಕಟ್ಟಡಗಳಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ" ಎಂದು ಹೇಳಿದರು.

Solar panel
ಸೌರಫಲಕ (ETV Bharat)

"ಹುಬ್ಬಳ್ಳಿ ಕಾರ್ಯಾಗಾರದಲ್ಲಿ 1045 KWp ಸಾಮರ್ಥ್ಯದ ಮತ್ತು ಮೈಸೂರು ಕಾರ್ಯಾಗಾರದಲ್ಲಿ 530 kWp ಸಾಮರ್ಥ್ಯದ ಸೌರ ಘಟಕಗಳನ್ನು ಅಳವಡಿಸಲಾಗಿದೆ. ಕೃಷ್ಣರಾಜಪುರಂ ಡೀಸೆಲ್ ಲೋಕೋ ಶೆಡ್ (240 kWp) ಮತ್ತು ಹುಬ್ಬಳ್ಳಿ EMD ಶೆಡ್ (640 kWp )ಗಳಲ್ಲಿ ಕೂಡ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಇದಲ್ಲದೇ, 312 ಲೆವೆಲ್ ಕ್ರಾಸಿಂಗ್ ಗೇಟ್‌ಗಳಿಗೆ ಮೇಲ್ಛಾವಣಿ ಸೌರ ಫಲಕಗಳನ್ನು ಅಳವಡಿಸುವ ಮೂಲಕ ನೈಋತ್ಯ ರೈಲ್ವೆ ತನ್ನ ವಿದ್ಯುತ್ ಅವಲಂಬನೆಯ ವೆಚ್ಚವನ್ನೂ ಸಹ ಕಡಿಮೆ ಮಾಡಿದೆ" ಎಂದು ತಿಳಿಸಿದರು.

"ಮುಂದಿನ ವರ್ಷಗಳಲ್ಲಿ ನೈಋತ್ಯ ರೈಲ್ವೆಯು 137 ಕೋಟಿ ರೂ ವೆಚ್ಚದಲ್ಲಿ ಹಲವು ನಿಲ್ದಾಣಗಳು, ಸೇವಾ ಕಟ್ಟಡಗಳು, ವಸತಿ ಕಟ್ಟಡಗಳು ಮತ್ತು ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ 15.7 MW ಹೆಚ್ಚುವರಿ ಸೌರ ಸಾಮರ್ಥ್ಯವನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ" ಎಂದು ಮಾಹಿತಿ ನೀಡಿದರು.

ಸೌರಶಕ್ತಿ ಉತ್ಪಾದನೆ ಹಾಗೂ ಬಳಕೆಯಿಂದ ಈ ರೈಲ್ವೆ ವಲಯಕ್ಕೆ ಕೋಟಿ ಕೋಟಿ ಹಣ ಉಳಿತಾಯವಾಗಿದೆ. 2021-22 ರಲ್ಲಿ 1.96 ಕೋಟಿ ಉಳಿತಾಯವಾಗಿದೆ. 2022-23 ರಲ್ಲಿ 2.06 ಕೋಟಿ ಉಳಿತಾಯ ಕಂಡಿದೆ. 2023-24 ರಲ್ಲಿ 2.81 ಕೋಟಿ ಉಳಿತಾಯವಾಗಿದೆ.‌ 2024-25 ನವಂಬರ್‌ವರೆಗೆ 2.59 ಕೋಟಿ ಉಳಿತಾಯವಾಗಿದೆ.

ರೈಲಿನ ವಿದ್ಯುದ್ದೀಕರಣಕ್ಕೆ ಇತ್ತೀಚಿಗೆ ನೈಋತ್ಯ ರೈಲ್ವೆಯು ದೀರ್ಘಕಾಲೀನ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿದೆ. IRCON ರಿಯಬಲ್ ಪವರ್ ಲಿಮಿಟೆಡ್‌ನಿಂದ 500 ಮೆಗಾವಾಟ್(ಭಾರತೀಯ ರೈಲ್ವೆಗೆ) ಸೌರ ವಿದ್ಯುತ್ ಖರೀದಿಗೆ 25 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ.

50 ಮೆಗಾವ್ಯಾಟ್​ ಸಾಮರ್ಥ್ಯದ ಪ್ರಾರಂಭಿಕ ಹಂತದ ಘಟಕದ ಸ್ಥಾಪನೆಯಿಂದ 2.8.2024ರಿಂದ ನೈಋತ್ಯ ರೈಲ್ವೆಗೆ (SWR) ಯೂನಿಟ್ 1.93 ರೂ ದರದಲ್ಲಿ ಸಿಕ್ಕಿದೆ. ಸಂಪೂರ್ಣ 500 ಮೆಗಾವ್ಯಾಟ್​ ಯೋಜನೆಯ ನಿರ್ಮಾಣ ಪೂರ್ಣಗೊಂಡ ನಂತರ, ಪ್ರತಿ ಯೂನಿಟ್‌ಗೆ 2.57 ರೂ. ದರದಲ್ಲಿ 25 ವರ್ಷಗಳ ಕಾಲ ವಿದ್ಯುತ್ ಖರೀದಿಸಲಾಗುವುದು. ಈ ಯೋಜನೆಯಿಂದ ವಾರ್ಷಿಕವಾಗಿ ಸುಮಾರು 105 ಕೋಟಿ ರೂ. ಉಳಿತಾಯವಾಗುವ ನಿರೀಕ್ಷೆಯಿದೆ.

Solar panel
ಸೌರಫಲಕ (ETV Bharat)

ನೈಋತ್ಯ ರೈಲ್ವೆಯಲ್ಲಿ ಒಟ್ಟು ಸೌರ ಸಾಮರ್ಥ್ಯ (kWp ನಲ್ಲಿ):

1. ರೈಲ್ವೆ ನಿಲ್ದಾಣಗಳು (146) 2159.705 kwp

2. ಸೇವಾ ಕಟ್ಟಡಗಳು (27 ಸ್ಥಳಗಳು) 4280.25 kwp

3. ಸೌರ ಪಂಪ್​ಗಳು (22 ಸ್ಥಳಗಳು) 130.360 kwp

4. ಎಲ್​ಸಿ ಗೇಟ್ಸ್ (312 ಸ್ಥಳಗಳು) 141.32 kwp

ಒಟ್ಟು ಸೌರ ವಿದ್ಯುತ್​ ಉತ್ಪಾದನೆ - 6711.635 kwp

ಸೌರ ವಿದ್ಯುತ್ ಉತ್ಪಾದನೆಯಿಂದ ಉಳಿತಾಯವಾದ ಮೊತ್ತ:

ವರ್ಷಸೌರ ಶಕ್ತಿ ಉತ್ಪಾದನೆ (ದಶಲಕ್ಷದಲ್ಲಿ)ಉಳಿಸಿದ ಮೊತ್ತ (ಕೋಟಿಗಳಲ್ಲಿ)
2024-25 (ನವೆಂಬರ್ ವರೆಗೆ )
4.282.59
2023-245.692.81
2022-234.902.06
2021-224.611.96

ಇದನ್ನೂ ಓದಿ: ಕುಂಭಮೇಳಕ್ಕೆ ಹುಬ್ಬಳ್ಳಿ-ವಾರಾಣಸಿ ನಡುವೆ 3 ಟ್ರಿಪ್ ವಿಶೇಷ ಎಕ್ಸ್​ಪ್ರೆಸ್ ರೈಲು ಸಂಚಾರ

ಇದನ್ನೂ ಓದಿ: ಹುಬ್ಬಳ್ಳಿಯಿಂದ ಸಂಚರಿಸುವ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಹೆಚ್ಚಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.