ಹಾಸನದಲ್ಲಿ ಅನ್ನದಾತರ ಪ್ರತಿಭಟನೆ ; ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹ! - ಹಾಸನ ಪ್ರತಿಭಟನೆ ನ್ಯೂಸ್
🎬 Watch Now: Feature Video

ಹಾಸನ : ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಇಂದು ಹಾಸನದಲ್ಲಿ ಕರೆ ಕೊಟ್ಟಿದ್ದ ಹೆದ್ದಾರಿ ತಡೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಾಸನ ಹೊರವಲಯದ ಭುವನಹಳ್ಳಿ ಬೈಪಾಸ್ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಸಂಘಟನೆಗಳು, ಮಾನವ ಹಕ್ಕು ಮತ್ತು ನಿರ್ಮೂಲನ ಸಮಿತಿ ಹಾಗೂ ಭಾರತೀಯ ಪ್ರಾಂತ ರೈತ ಸಂಘದ ಮುಖಂಡರೆಲ್ಲ ಪಾಲ್ಗೊಂಡಿದ್ದರು. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ ವರದಿ ಮಾಡಿದ್ದಾರೆ.