ಮೆಕ್ಕೆಜೋಳಕ್ಕೂ ಕಣ್ಣು ಹಾಕಿದ ಕೊರೊನಾ: ತಾನು ಬೆಳೆದ ಬೆಳೆಯನ್ನೇ ನಾಶಪಡಿಸಿದ ರೈತ - farmer destroyed the crop

🎬 Watch Now: Feature Video

thumbnail

By

Published : Mar 20, 2020, 2:49 PM IST

ಕೊರೊನಾ ಕರಿಛಾಯೆ ಇದೀಗ ರೈತರ ಬೆಳೆ ಮೇಲೂ ಕೆಟ್ಟ ಪರಿಣಾಮ ಬೀರಿದೆ. ಮೆಕ್ಕೆಜೋಳ ಬೆಲೆ ದಿಢೀರ್ ಕುಸಿತವಾಗಿದ್ದು ರೈತನೊಬ್ಬ ಕಟಾವಿಗೆ ಬಂದಿದ್ದ ಮೆಕ್ಕೆಜೋಳದ ತೆನೆಯನ್ನು ಜೆಸಿಬಿ ಯಂತ್ರದ ನಾಶಪಡಿಸಿದ್ದಾನೆ. ಈ ಘಟನೆ ಹಾವೇರಿಯ ಬ್ಯಾಡಗಿ ತಾಲೂಕಿನ ಹೊಸ ಶಿಡೇನೂರ ಗ್ರಾಮದಲ್ಲಿ ನಡೆದಿದೆ. ರೈತ ಮಹದೇವಪ್ಪ ಒಡೆಯನಪುರ ಎಂಬಾತ ತನ್ನ ಒಂದೂವರೆ ಎಕರೆ ಪ್ರದೇಶದಲ್ಲಿ ನೀರಾವರಿ ಮೂಲಕ ಮೆಕ್ಕೆಜೋಳ ಬಿತ್ತನೆ ಮಾಡಿದ್ದ. ಪ್ರತಿ ಕ್ವಿಂಟಲ್​ಗೆ ಸುಮಾರು ₹ 2,000 ಗಳಷ್ಟಾದರೂ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ. ಆದರೆ ಕಟಾವು ಮಾಡಬೇಕೆನ್ನುವಷ್ಟರಲ್ಲಿ ಮೆಕ್ಕೆಜೋಳ ದರ ಕುಸಿದಿದೆ. ಅರ್ಧ ಬೆಲೆಗೂ ಮೆಕ್ಕೆಜೋಳವನ್ನು ಕೇಳುವವರಿಲ್ಲಂತಾಗಿದೆ. ಹೀಗಾಗಿ ನೊಂದಿರುವ ರೈತ ಬೆಳೆ ನಾಶ ಮಾಡಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.