ಕಬ್ಬು ಕಟಾವು, ಸಾಗಣೆ ಮಾಡಲು ಹೆಚ್ಚಿನ ಹಣ ಪೀಕುತ್ತಿರುವ ಕಾರ್ಮಿಕರು: ರೈತರು ಕಂಗಾಲು - chikkodi farmers problem
🎬 Watch Now: Feature Video
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹಲವೆಡೆ ಹೆಚ್ಚಾಗಿ ರೈತರು ಕಬ್ಬನ್ನು ಬೆಳೆಯುತ್ತಾರೆ. ಈ ಬಾರಿ ಕಬ್ಬು ಕಟಾವು, ಸಾಗಣೆ ಮಾಡಲು ಕಾರ್ಮಿಕರಿಂದ ಹಣದ ಬೇಡಿಕೆ ಹೆಚ್ಚಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಒಂದು ಎಕರೆ ಕಬ್ಬು ಕಟಾವು ಮಾಡಲು ಕಳೆದ ವರ್ಷ 4 ರಿಂದ 5 ಸಾವಿರ ರೂ. ಹಣ ಖರ್ಚು ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಒಂದು ಎಕರೆ ಕಬ್ಬು ಕಟಾವು ಮಾಡಿ ಸಾಗಣೆ ಮಾಡಬೇಕೆಂದರೆ ಸುಮಾರು 8 - 10 ಸಾವಿರ ಹಣ ಖರ್ಚಾಗುತ್ತಿದ್ದು, ರೈತರಿಗೆ ಕಾರ್ಖಾನೆಗಳಿಗೆ ಕಬ್ಬು ಕಳುಹಿಸಲು ತೊಂದರೆಯಾಗುತ್ತಿದೆ. ಹಾಗಾಗಿ ಕಬ್ಬು ಕಟಾವು ಮಾಡುವ ಕಾರ್ಮಿಕರು ರೈತರಿಂದ ಹೆಚ್ಚಿನ ಹಣ ವಸೂಲಾತಿ ಮಾಡುವ ಕ್ರಮಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ಕಡಿವಾಣ ಹಾಕಬೇಕು ಎಂದು ರೈತ ಸಿದ್ದಪ್ಪ ಹವಳೆ ಆಗ್ರಹಿಸಿದ್ದಾರೆ.