ಚುನಾವಣಾ ವೀಕ್ಷಕರ ವಾಹನ ತಡೆದ ಪೊಲೀಸರು: ಹಿರಿಯ ಅಧಿಕಾರಿ ಗರಂ - Elections commissioner Shalini Rajneesh

🎬 Watch Now: Feature Video

thumbnail

By

Published : Nov 10, 2020, 12:23 PM IST

Updated : Nov 10, 2020, 1:00 PM IST

ಧಾರವಾಡ: ಚುನಾವಣಾ ವೀಕ್ಷಕರ ಕಾರನ್ನು ಪೊಲೀಸರು ತಡೆದ ಘಟನೆ ನಗರದಲ್ಲಿ ನಡೆದಿದೆ. ಇದರಿಂದ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್​ ಪೊಲೀಸರ ವಿರುದ್ಧ ಗರಂ ಆಗಿದ್ದಾರೆ. ಶಾಲಿನಿ‌ ರಜನೀಶ್ ಚುನಾವಣಾ ಆಯೋಗದ ವೀಕ್ಷಕರಾಗಿದ್ದಾರೆ. ಮತ ಎಣಿಕೆ ಉಸ್ತುವಾರಿ ನೋಡಿಕೊಳ್ಳಲು ಆಗಮಿಸಿದ ವೇಳೆ ಪೊಲೀಸರ ಯಡವಟ್ಟು ಮಾಡಿಕೊಂಡ ಹಿನ್ನೆಲೆ ಅವರು ಗರಂ ಆಗಿದ್ದಾರೆ‌. ಸ್ಟ್ರಾಂಗ್ ರೂಮ್ ಓಪನ್ ಮಾಡುವ ವೇಳೆ ಅವರು ಹಾಜರ್ ಇರಬೇಕಿತ್ತು. ಆದರೆ ಗೇಟ್‌ನಲ್ಲಿ ಪೊಲೀಸರು ವಾಹನ ತಡೆದಿದ್ದು, ಈ ವೇಳೆ ಚುನಾವಣಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್‌ಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಒಳ ಬಂದು ಎಸ್​ಪಿ ಕೃಷ್ಣಕಾಂತ್​​ಗೆ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ.
Last Updated : Nov 10, 2020, 1:00 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.