ಹು-ಧಾ ಮಹಾನಗರದಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿವೆ ಇ-ಟಾಯ್ಲೆಟ್ಗಳು
🎬 Watch Now: Feature Video
ಹುಬ್ಬಳ್ಳಿ: ಮಹಾನಗರದಲ್ಲಿ ಸ್ಮಾರ್ಟ್ ಸಿಟಿ ಕಂಪನಿ ಅಳವಡಿಸಿರುವ 15 ಸುಧಾರಿತ ಇ-ಶೌಚಾಲಯಗಳು ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ. ಇವುಗಳನ್ನ ಬಳಕೆ ಮಾಡುವವರಿಗಿಂತಲೂ ದುರ್ಬಳಕೆ ಮಾಡುವವರೇ ಹೆಚ್ಚಾಗುತ್ತಿದ್ದಾರೆ. ಇದರಿಂದಾಗಿ ಸ್ವಚ್ಛತೆ ಕಣ್ಮರೆಯಾಗಿದ್ದು,ಸಾರ್ವಜನಿಕರಿಗೆ ಕೆಲವು ಕಡೆ ಮೂಗು ಮುಚ್ಚಿಕೊಂಡೇ ಇ-ಶೌಚಾಲಯ ಬಳಸುವ ಅನಿವಾರ್ಯತೆ ಎದುರಾಗಿದ್ರೆ, ಇನ್ನೂ ಕೆಲವು ಕಡೆ ಇ-ಟಾಯ್ಲೆಟ್ಗಳು ನಿರ್ವಹಣೆ ಇಲ್ಲದೆ ಕಸದ ತೊಟ್ಟಿಗಳಾಗಿವೆ.