ಕೊಳ್ಳೇಗಾಲದಲ್ಲಿ ಅನಾವಶ್ಯಕವಾಗಿ ರಸ್ತೆಗಿಳಿಯುವವರ ಮೇಲೆ ಕಣ್ಣಿಡಲಿದ್ದಾನೆ ’ದ್ರೋಣಾ’ಚಾರ್ಯ
🎬 Watch Now: Feature Video
ಚಾಮರಾಜನಗರ: ಜನತೆಯ ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಲು ಕೊಳ್ಳೇಗಾಲ ಪೊಲೀಸರು ಡ್ರೋಣ್ ಮೊರೆ ಹೋಗಿದ್ದಾರೆ. ಡ್ರೋಣ್ ಕ್ಯಾಮರಾ ಹಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಡಿವೈಎಸ್ಪಿ ನವೀನ್ ಕುಮಾರ್, ಕೊರೊನಾ ವೈರಸ್ ತಡೆಗಟ್ಟಲು ಸರ್ಕಾರ ಲಾಕ್ಡೌನ್ಗೆ ಆದೇಶ ನೀಡಿದೆ. ಆದರೆ ನಿಯಮ ಉಲ್ಲಂಘಿಸಿ ಅನಾವಶ್ಯಕವಾಗಿ ತಿರುಗಾಡುವವರನ್ನು ಡ್ರೋಣ್ ಮೂಲಕ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.