ETV Bharat / sports

ಜಸ್ಪ್ರೀತ್​ ಬುಮ್ರಾ vs ಪ್ಯಾಟ್​ ಕಮಿನ್ಸ್​: ಯಾರು ಬೆಸ್ಟ್?​: ಹೀಗಿದೆ ಕಳೆದ 40 ಟೆಸ್ಟ್​ ಪಂದ್ಯಗಳ ಸಾಧನೆ - JASPRIT BUMRAH AND PAT CUMMINS

ಭಾರತದ ಬೌಲರ್‌ ಜಸ್ಪ್ರೀತ್​ ಬುಮ್ರಾ ಮತ್ತು ಆಸ್ಟ್ರೇಲಿಯಾ ಬೌಲರ್ ಪ್ಯಾಟ್​ ಕಮಿನ್ಸ್​ ಅವರ ಟೆಸ್ಟ್​ ಅಂಕಿಅಂಶ ಹೀಗಿದೆ.

ಜಸ್ಪ್ರೀತ್​ ಬುಮ್ರಾ ಮತ್ತು ಪ್ಯಾಟ್​ ಕಮಿನ್ಸ್​
ಜಸ್ಪ್ರೀತ್​ ಬುಮ್ರಾ ಮತ್ತು ಪ್ಯಾಟ್​ ಕಮಿನ್ಸ್​ (IANS)
author img

By ETV Bharat Sports Team

Published : Nov 10, 2024, 9:46 AM IST

Jasprit Bumrah And Pat Cummins Test Stats: ಬಾರ್ಡರ್​ ಗವಾಸ್ಕರ್​ ಟ್ರೋಫಿ (Border Gavaskar Trophy) ಆಡಲು ಟೀಂ ಇಂಡಿಯಾ ಈ ತಿಂಗಳು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ. ಉಭಯ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್​ ಸರಣಿ (Test Series) ಇದೇ ತಿಂಗಳು ಅಂದರೆ ನ.22ರಿಂದ ಆರಂಭವಾಗಲಿದೆ. ಈಗಾಗಲೇ ತವರಿನಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಕೈಚೆಲ್ಲಿರುವ ಭಾರತ ಇದೀಗ ಬಾರ್ಡರ್​ ಗವಾಸ್ಕರ್​ ಟ್ರೋಫಿ ಸರಣಿ ಗೆದ್ದು ಕಮ್​ಬ್ಯಾಕ್​ ಮಾಡಲು ಹವಣಿಸುತ್ತಿದೆ.

ಆಸ್ಟ್ರೇಲಿಯಾ ಪಿಚ್​ಗಳು ವೇಗದ ಬೌಲಿಂಗ್​ಗೆ ಹೆಚ್ಚು ಸಹಾಯಕವಾಗಿರುವ ಕಾರಣ ಟೀಂ ಇಂಡಿಯಾ ಬುಮ್ರಾ, ಆಕಾಶ್​ದೀಪ್, ಸಿರಾಜ್​ ಅವರಂತಹ ವೇಗದ ಬೌಲರ್​ಗಳೊಂದಿಗೆ ಸರಣಿ ಆಡಲು ಯೋಜಿಸಿದೆ. ಮತ್ತೊಂದೆಡೆ, ಆಸ್ಟ್ರೇಲಿಯಾ ಕೂಡ ಪ್ಯಾಟ್​ ಕಮಿನ್ಸ್​ ಮತ್ತು ಸ್ಟಾರ್ಕ್​ ಅವರಂತಹ ವೇಗದ ಬೌಲರ್‌ನೊಂದಿಗೆ ಟೀಂ ಇಂಡಿಯಾವನ್ನು ಕಟ್ಟಿಹಾಕಲು ಯೋಜನೆ ರೂಪಿಸಿಕೊಂಡಿದೆ. ಅದರಲ್ಲೂ ಜಸ್ಪ್ರೀತ್​ ಬುಮ್ರಾ (Jasprit Bumrah) ಮತ್ತು ಪ್ಯಾಟ್​ ಕಮಿನ್ಸ್ (​Pat Cummins) ಈ ಸರಣಿಯ ಸೆಂಟರ್​ ಆಫ್​ ಅಟ್ರಾಕ್ಷನ್ ಆಟಗಾರರಾಗಿದ್ದಾರೆ.

ಜಸ್ಪ್ರೀತ್​ ಬುಮ್ರಾ
ಜಸ್ಪ್ರೀತ್​ ಬುಮ್ರಾ (IANS)

ಬುಮ್ರಾ vs ಕಮಿನ್ಸ್-​ 40 ಟೆಸ್ಟ್​ ಪಂದ್ಯಗಳ ಅಂಕಿಅಂಶ:

ಜಸ್ಪ್ರೀತ್​ ಬುಮ್ರಾ: ಜಸ್ಪ್ರೀತ್​ ಬುಮ್ರಾ ಕಳೆದ 40 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ತೋರಿದ್ದಾರೆ. ತಮ್ಮ ಮಾರಕ ಬೌಲಿಂಗ್​ನಿಂದ ಕಳೆದ ನಲವತ್ತು ಪಂದ್ಯಗಳಲ್ಲಿ 173 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 20.57.

5 ವಿಕೆಟ್​ ಗೊಂಚಲು: ಬುಮ್ರಾ ಕಳೆದ 40 ಟೆಸ್ಟ್​ ಪಂದ್ಯಗಳಲ್ಲಿ ಒಟ್ಟು 10 ಬಾರಿ 5ಕ್ಕೂ ಹೆಚ್ಚು ವಿಕೆಟ್​ಪಡೆದಿದ್ದಾರೆ. ಬೌಲಿಂಗ್​ ಸ್ಟ್ರೈಕ್​ ರೇಟ್​ 44.6 ಆಗಿದೆ. ಈ ಅವಧಿಯಲ್ಲಿ 27ಕ್ಕೆ6 ವಿಕೆಟ್​​ ಪಡೆದಿರುವುದು ಬೆಸ್ಟ್​ ಇನ್ನಿಂಗ್ಸ್​ ಆಗಿದೆ.

ಪ್ಯಾಟ್​ ಕಮಿನ್ಸ್​
ಪ್ಯಾಟ್​ ಕಮಿನ್ಸ್​ (ANI)

ಪ್ಯಾಟ್​ ಕಮಿನ್ಸ್​: ಪ್ಯಾಟ್​ ಕಮಿನ್ಸ್​ ಕೂಡ ತಮ್ಮ ಮಾರಕ ಬೌಲಿಂಗ್​ಗೆ ಹೆಸರುವಾಸಿ. ಕಳೆದ 40 ಟೆಸ್ಟ್​ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಹೆಚ್ಚು ವಿಕೆಟ್​ ಪಡೆದು ಬುಮ್ರಾಗಿಂತ ಕೊಂಚ ಮುಂದಿದ್ದಾರೆ. 40 ಪಂದ್ಯಗಳಲ್ಲಿ ಒಟ್ಟು 189 ವಿಕೆಟ್ ಪಡೆದಿದ್ದಾರೆ. ಇವರ ಬೌಲಿಂಗ್​ ಸರಾಸರಿ 21.75.

5 ವಿಕೆಟ್​ ಗೊಂಚಲು: ಕಮಿನ್ಸ್​ ಕಳೆದ 40 ಪಂದ್ಯಗಳಲ್ಲಿ ಒಟ್ಟು 6 ಬಾರಿ 5 ವಿಕೆಟ್​ ಪಡೆದಿದ್ದಾರೆ. ಬೌಲಿಂಗ್​ ಸ್ಟ್ರೈಕ್​ ರೇಟ್​ 47.1. ಈ ಅವಧಿಯಲ್ಲಿ 23ಕ್ಕೆ6 ವಿಕೆಟ್​​ ಪಡೆದಿರುವುದು ಇವರ ಬೆಸ್ಟ್​ ಇನ್ನಿಂಗ್ಸ್​ ಆಗಿದೆ.

ಟೆಸ್ಟ್​ ದಾಖಲೆ: ಪ್ಯಾಟ್​ ಕಮಿನ್ಸ್​ ಇದುವರೆಗೂ ಒಟ್ಟು 62 ಟೆಸ್ಟ್​ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಒಟ್ಟು 269 ವಿಕೆಟ್​ಗಳನ್ನು ಪಡೆದಿದ್ದಾರೆ. ಪಂದ್ಯವೊಂದರಲ್ಲಿ 62 ರನ್​ಗಳಿಗೆ 10 ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ: IND vs SA 2nd T20: ಮೊದಲ ಪಂದ್ಯ ಗೆದ್ದರೂ ಟೀಂ ಇಂಡಿಯಾಗೆ ಕಡಿಮೆ ಆಗಿಲ್ಲ ಟೆನ್ಶನ್: ಕಾರಣ ಏನು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.