ದೀಪಾವಳಿ ಹಬ್ಬ: ಮಾರುಕಟ್ಟೆಗೆ ಲಗ್ಗೆ ಇಟ್ಟ ಸುಂದರ ಆಕಾಶ ದೀಪಗಳು - ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಆಕಾಶ ದೀಪಗಳು
🎬 Watch Now: Feature Video
ಬೆಂಗಳೂರು: ದೀಪಗಳ ಹಬ್ಬ ದೀಪಾವಳಿಗೆ ಇನ್ನೇನು ಒಂದೇ ದಿನ ಬಾಕಿ ಇದೆ. ಹಬ್ಬಕ್ಕೆ ಮುಖ್ಯವಾದ ವಸ್ತು ಅಂದ್ರೆ ಅದು ದೀಪ. ಈ ವರ್ಷ ಮಾರುಕಟ್ಟೆಗೆ ವಿಭಿನ್ನವಾದ ದೀಪಗಳು ಲಗ್ಗೆ ಇಟ್ಟಿವೆ. ಎಲ್ಲರನ್ನು ತನ್ನ ಲುಕ್ ಮೂಲಕವೇ ಸೆಳೆಯೋ ಆಕಾಶ ದೀಪಗಳು ಈ ಬಾರಿ ಗ್ರಾಹಕರ ಗಮನ ಸೆಳೆದಿವೆ. ಕೆಲವು ದಿನಗಳಿಂದ ನಗರದ ಮಲ್ಲೇಶ್ವರಂ, ಸಿಟಿ ಮಾರುಕಟ್ಟೆ, ಗಾಂಧಿ ಬಜಾರ್, ಯಶವಂತಪುರ ಮಾರುಕಟ್ಟೆ ಸೇರಿದಂತೆ ನಗರದ ಹಲವು ಮಾರುಕಟ್ಟೆಗಳಲ್ಲಿ ಸುಂದರವಾದ ಆಕಾಶ ಬುಟ್ಟಿಗಳು ಜಗಮಗಿಸುತ್ತಿವೆ. ಬಣ್ಣ-ಬಣ್ಣದ ದೀಪಗಳು, 2-4 ಸ್ಟೆಪ್‌ಗಳಿರುವ ದೀಪಗಳು, ಗಣೇಶನ ದೀಪಗಳು ನವಿಲು ದೀಪಗಳು ಹೀಗೆ ಹಲವಾರು ಡಿಸೈನ್ಗಳ ದೀಪಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.