ಸುರಪುರ: ವನವಾಸಿ ಕಲ್ಯಾಣ ಸಂಘಟನೆಯಿಂದ ಜಿಲ್ಲಾಮಟ್ಟದ ಕ್ರೀಡಾಕೂಟ - ಲಕ್ಷ್ಮೀಪುರ ಮರಡಿ ಮಲ್ಲಿಕಾರ್ಜುನ ದೇವಸ್ಥಾನ
🎬 Watch Now: Feature Video

ತಾಲೂಕಿನ ಲಕ್ಷ್ಮೀಪುರ ಮರಡಿ ಮಲ್ಲಿಕಾರ್ಜುನ ದೇವಸ್ಥಾನ ಬಳಿಯಲ್ಲಿ ವನವಾಸಿ ಕಲ್ಯಾಣ ಸಂಘಟನೆಯಿಂದ ಜಿಲ್ಲಾಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು. ತಾಲೂಕಿನ ದೇವಪುರ ತಿಂಥಣಿ ಯಮನೂರ ಲಕ್ಷ್ಮಿಪುರ ಸೇರಿದಂತೆ ಅನೇಕ ಗ್ರಾಮಗಳ ವನವಾಸಿ ಕಲ್ಯಾಣ ಸಂಘಟನೆಯ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವನವಾಸಿ ಕಲ್ಯಾಣ ವತಿಯಿಂದ ಇದೊಂದು ಸ್ನೇಹಮಯವಾದ ಕ್ರೀಡಾಕೂಟವಾಗಿದ್ದು, ಇಲ್ಲಿ ಭಾಗವಹಿಸುವ ತಂಡಗಳು ಕೇವಲ ಕ್ರೀಡಾ ಪ್ರೇಮವನ್ನು ಮೆರೆಯಬೇಕು ಎಂದು ಮುಖಂಡರು ಹೇಳಿದರು.