ಕೊರೊನಾ ಕಟ್ಟೆಚ್ಚರದ ನಡುವೆಯೂ ರಾಯಚೂರು ಸಾರಿಗೆ ಇಲಾಖೆ ಕಚೇರಿಯಲ್ಲಿ ಜನಜಂಗುಳಿ - ಕೊರೊನಾ ವೈರಸ್ ಸುದ್ದಿ
🎬 Watch Now: Feature Video
ರಾಯಚೂರು: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಸಾರ್ವಜನಿಕರು ಹೆಚ್ಚಾಗಿ ಬರುವ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮನವಿ ನೀಡುವುದನ್ನ ನಿಷೇಧಿಸಲಾಗಿದೆ. ಆದರೆ ರಾಯಚೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ನಾನಾ ಕೆಲಸಕ್ಕೆ ಬರುತ್ತಿದ್ದಾರೆ. ಅಲ್ಲದೆ ಗುಂಪು ಗುಂಪಾಗಿ ಸೇರುವ ಆರ್‌ಟಿಒ ಕಚೇರಿಯಲ್ಲಿ ನಿಷೇಧ ಹೇರದೆ ಇರುವುದು ವಿಪರ್ಯಾಸ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬಂದಿವೆ.