ಸೋಂಕು ಹರಡುವಿಕೆ ತಡೆಗೆ ಮಹಿಳೆಯರಲ್ಲಿ ಸ್ವಚ್ಛತೆ ಅರಿವು: ಶಶಿಕಲಾ ವಿ ಟೆಂಗಳಿ - food kits for women
🎬 Watch Now: Feature Video
ಲಾಕ್ಡೌನ್ ವೇಳೆ ಸಂಕಷ್ಟಕ್ಕೊಳಗಾದ ದಮನಿತ ಮಹಿಳೆಯರಿಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಆರ್ಥಿಕ ನೆರವನ್ನು ನೀಡಲಾಯ್ತು. ಹಾಗೂ ಮುಖ್ಯವಾಗಿ ಸ್ವಚ್ಛತೆಯ ಅರಿವನ್ನು ಮೂಡಿಸಲಾಯಿತು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ ಟೆಂಗಳಿ ತಿಳಿಸಿದ್ದಾರೆ. 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಈ ವೇಳೆ 75,000 ಆಹಾರ ಕಿಟ್ಗಳನ್ನು ದಮನಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ದೇವದಾಸಿಯರು ಸೇರಿದಂತೆ ಆರ್ಥಿಕ ಸಂಕಷ್ಟಕ್ಕೆ ಒಳಗಾದಂತಹ ಮಹಿಳೆಯರಿಗೆ ನಿಗಮದ ವತಿಯಿಂದ ನೀಡಲಾಗಿದೆ ಎಂದು ಮಾಹಿತಿ ನೀಡಿದ್ರು.