ಲಾಕ್ಡೌನ್ ನಡುವೆ ವ್ಯಕ್ತಿ ಕೊಲೆಗೈದು ಶವ ಬಿಸಾಕಿ ಹೋದ ದುಷ್ಕರ್ಮಿಗಳು - dead body found in hanagal bhutheshwar temple
🎬 Watch Now: Feature Video
ಹಾನಗಲ್: ಹಾವೇರಿ ಜಿಲ್ಲೆಯ ಹಾನಗಲ್ನಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಇಲ್ಲಿನ 4ನೇ ಕ್ರಾಸ್ ಬಳಿಯ ಭೂತೇಶ್ವರ ದೇವಸ್ಥಾನದ ಬಳಿ ಶವ ಎಸೆದು ಹೋಗಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಹಾವಣಗಿ ಗ್ರಾಮದ ಸೋಮಶೇಖರ ಮಹದೇವಪ್ಪ ಆಡೂರು(42) ಎಂದು ಗುರುತಿಸಲಾಗಿದೆ. ಈತ ದನದ ವ್ಯಾಪಾರ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.