ನಿರಾಶ್ರಿತರ ಕೇಂದ್ರಕ್ಕೆ ಡಿಸಿಎಂ ಗೋವಿಂದ ಕಾರಜೋಳ ದಿಢೀರ್ ಭೇಟಿ - DCM Govinda Karajola visits the Refugee Center
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4891488-thumbnail-3x2-chai.jpg)
ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಇರುವ ನಿರಾಶ್ರಿತರ ಕೇಂದ್ರಕ್ಕೆ ಡಿಸಿಎಂ ಗೋವಿಂದ ಕಾರಜೋಳ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ವೃದ್ಧೆಯೊಬ್ಬರು ಬೆಳಗಾವಿಯ ಮಮದಾಪೂರ ಗ್ರಾಮದ ಪ್ರಭಾವಿತೆ ಎಂದು ತಿಳಿಸಿದ್ದು ತನ್ನ ಮನೆಗೆ ಮರಳುವುದಾಗಿ ಡಿಸಿಎಂ ಬಳಿ ಅಳಲು ತೋಡಿಕೊಂಡರು. ಸಂತ್ರಸ್ತೆಯ ನೋವಿಗೆ ಮರುಗಿದ ಕಾರಜೋಳ, ಸ್ಥಳದಲ್ಲೇ ಬೆಳಗಾವಿ ಮಮದಾಪೂರ ವ್ಯಾಪ್ತಿಯ ಐಜಿಗೆ ಕರೆ ಮಾಡಿ ಕೂಡಲೇ ವೃದ್ಧೆಯ ಸಂಬಂಧಿಕರನ್ನು ಪತ್ತೆ ಹಚ್ಚುವಂತೆ ಸೂಚನೆ ನೀಡಿದರು.