ಉಡುಪಿ: ನಾಗರ ಪಂಚಮಿ ಹಬ್ಬ ಆಚರಣೆ ಕುರಿತು ಡಿಸಿ ಸ್ಪಷ್ಟೀಕರಣ - Udupi news
🎬 Watch Now: Feature Video
ನಾಗರ ಪಂಚಮಿಯಂದು ನಾಗರ ಪೂಜೆ ಮಾಡಬಾರದು ಎಂದು ಡಿಸಿ ಅವರು ಹೇಳಿದ್ದಾರೆ ಎಂದು ತಪ್ಪು ಸಂದೇಶಗಳನ್ನು ರವಾನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾದಿಕಾರಿ ಎಚ್ಚರಿಸಿದ್ದಾರೆ. ಕೋವಿಡ್ ಇರುವುದರಿಂದ ಯಾವುದೇ ಹಬ್ಬವನ್ನ ಸಾರ್ವಜನಿಕವಾಗಿ ಆಚರಣೆ ಮಾಡಬಾರದು. ಅವರವರ ಮನೆಯಲ್ಲಿ ನಾಗಪೂಜೆ ಮಾಡಲು ನಾಗರಪಂಚಮಿ ಆಚರಣೆ ಮಾಡಲು ಯಾರ ಅನುಮತಿಯ ಅಗತ್ಯವಿಲ್ಲ. ಸಾರ್ವಜನಿಕರು ಒಟ್ಟಿಗೆ ಸೇರಿ ಆಚರಣೆ ಮಾಡಲು ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.
TAGGED:
Udupi news