ಗಣಿನಾಡಲ್ಲಿ ಕೊರೊನಾ ತಾಂಡವ: ದಿನೇ ದಿನೆ ಹೆಚ್ಚುತ್ತಿದೆ ಆತಂಕ! - ಬಳ್ಳಾರಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳ ಸುದ್ದಿ,
🎬 Watch Now: Feature Video
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಲ್ಲೇ ಅಂದಾಜು 237 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಸುಮಾರು 930 ಕೇಸ್ಗಳು ಪತ್ತೆಯಾಗಿದ್ದು, ಕೇವಲ 436 ಮಂದಿಗೆ ಈ ಮಹಾಮಾರಿ ಸೋಂಕಿದೆ. ಇಲ್ಲಿಯವರೆಗೆ 29 ಮಂದಿ ಮಾತ್ರ ಸಾವನ್ನಪ್ಪಿದ್ದು, ನೆರೆಯ ಆಂಧ್ರಪ್ರದೇಶದ ಗಡಿಭಾಗದಿಂದ ಬಳ್ಳಾರಿ ವಿಮ್ಸ್ಗೆ ದಾಖಲಾದವರೇ ಸಾವಿಗೀಡಾಗಿದ್ದಾರೆ. ಉಸಿರಾಟದ ತೊಂದರೆ, ಮಧುಮೇಹ ಹಾಗೂ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗದವರು ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆಯ ದಿನ ಹೊಸದಾಗಿ 50 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 409 ಮಂದಿ ಗುಣ ಮುಖರಾಗಿದ್ದು, ಇನ್ನು 492 ಸಕ್ರಿಯ ಪ್ರಕರಣಗಳಿವೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.