ಕೊರೊನಾ ವ್ಯಾಕ್ಸಿನ್ ಪಡೆದ ದಾವಣಗೆರೆ ಎಸ್ಪಿ ಹೇಳಿದ್ದೇನು? - S P Hanumantharaya
🎬 Watch Now: Feature Video

ನಾವು ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿದ್ದು, ನೀವು ಕೂಡ ಚುಚ್ಚುಮದ್ದನ್ನು ಹಾಕಿಸಿಕೊಳ್ಳಿ ಎಂದು ಎಸ್ಪಿ ಹನುಮಂತರಾಯ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾನು ಹಾಗೂ ಜಿಲ್ಲಾಧಿಕಾರಿಗಳಿಬ್ಬರು ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡಿದ್ದು, ನಮಗೆ ಯಾವುದೇ ಅಡ್ಡ ಪರಿಣಾಮಗಳು ಆಗಿಲ್ಲ. ಕೊರೊನಾ ವೈರಸ್ನಿಂದ ರಕ್ಷಣೆ ಪಡೆದುಕೊಳ್ಳಲು ಇದು ಸುಲಭ ವಿಧಾನ ಆಗಿದೆ ಎಂದರು.