4 ಸಾವಿರಕ್ಕೂ ಹೆಚ್ಚು ಸ್ಯಾಂಪಲ್ಗಳ ವರದಿಗೆ ಕಾಯುತ್ತಿರುವ ದಾವಣೆಗೆರೆ ಜನತೆ! - corona test
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7841506-13-7841506-1593575196748.jpg)
ಜಿಲ್ಲೆಯಲ್ಲಿ 4000ಕ್ಕೂ ಅಧಿಕ ಜನರ ಕೊರೊನಾ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹಾವಳಿ ಮುಂದುವರೆದಿದ್ದು, ಇನ್ನೂ 4375 ಗಂಟಲು ದ್ರವ ಸ್ಯಾಂಪಲ್ಗಳ ಪರೀಕ್ಷಾ ವರದಿ ಬರಬೇಕಿದ್ದು, ಇದು ಜನರ ಆತಂಕಕ್ಕೆ ಕಾರಣವಾಗಿದೆ. ಇದುವರೆಗೆ 309 ಸೋಂಕಿತರಿದ್ದರೆ, ಹೊಂಡ ಸರ್ಕಲ್ನ 50 ವರ್ಷದ ಮಹಿಳೆ ಕೊರೊನಾಕ್ಕೆ ಬಲಿಯಾಗುವ ಮೂಲಕ ಸಾವಿನ ಸಂಖ್ಯೆ 8ಕ್ಕೇರಿದೆ. ತೀವ್ರ ಉಸಿರಾಟದಿಂದ ಬಳಲುತ್ತಿರುವ 512 ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ 12 ಪಾಸಿಟಿವ್ ಬಂದಿದ್ದರೆ, 489 ಸ್ಯಾಂಪಲ್ಗಳು ನೆಗೆಟಿವ್ ಬಂದಿದೆ. 11 ಸ್ಯಾಂಪಲ್ಗಳ ವರದಿ ಬರಬೇಕಿದೆ.