ETV Bharat / state

ಚಿತ್ರದುರ್ಗದಲ್ಲಿ ಮಾರ್ಗದರ್ಶಿ ಚಿಟ್ಸ್ ಫಂಡ್​ 122ನೇ ಶಾಖೆ ಉದ್ಘಾಟನೆ - MARGADARSHI CHITS 122ND BRANCH

ಮಾರ್ಗದರ್ಶಿ ಚಿಟ್​​ ಫಂಡ್​ ಪ್ರೈವೇಟ್​ ಲಿಮಿಟೆಡ್​​ನ​​ 122ನೇ ಶಾಖೆಯನ್ನು ಚಿತ್ರದುರ್ಗದಲ್ಲಿ ಉದ್ಘಾಟನೆ ಮಾಡಲಾಯಿತು.

margadarshi-chits-122nd-branch-inaugurated-in-chitradurga
ಮಾರ್ಗದರ್ಶಿ ಚಿಟ್​​ ಫಂಡ್​ 122ನೇ ಶಾಖೆ ಉದ್ಘಾಟನೆ (ETV Bharat)
author img

By ETV Bharat Karnataka Team

Published : Feb 17, 2025, 7:11 PM IST

ಚಿತ್ರದುರ್ಗ : ಮಧ್ಯ ಕರ್ನಾಟಕದ ಕೇಂದ್ರ ಬಿಂದು, ಕೋಟೆ ನಾಡು ಚಿತ್ರದುರ್ಗದಲ್ಲಿ ಮಾರ್ಗದರ್ಶಿ ಚಿಟ್ಸ್​​ನ ನೂತನ ಶಾಖೆ ಸೋಮವಾರ ಆರಂಭಗೊಂಡಿದೆ. ಮಾರ್ಗದರ್ಶಿ ಚಿಟ್ಸ್​​​​​ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಶೈಲಜಾ ಕಿರಣ್ ಅವರು 122ನೇ ಶಾಖೆಯನ್ನು ಉದ್ಘಾಟಿಸಿ, ಶುಭ ಕೋರಿದರು.

ನೂತನ ಶಾಖೆಯ ಉದ್ಘಾಟನೆ ವೇಳೆ ಕರ್ನಾಟಕದ ಮಾರ್ಗದರ್ಶಿ ಚಿಟ್ಸ್​​​​​ನ ನಿರ್ದೇಶಕರಾದ ಲಕ್ಷ್ಮಣರಾವ್, ಮಾರ್ಗದರ್ಶಿ ಚಿಟ್ಸ್​​ ಉಪಾಧ್ಯಕ್ಷ ಬಲರಾಮ ಕೃಷ್ಣ, ಜನರಲ್ ಮ್ಯಾನೇಜರ್​​ಗಳಾದ ನಂಜುಂಡಯ್ಯ, ಎ. ಚಂದ್ರಯ್ಯ, ಹಿರಿಯ ಅಧಿಕಾರಿಗಳಾದ ವಿಶ್ವನಾಥರಾವ್, ವಿಜಯಕುಮಾರ್ ಸೇರಿದಂತೆ ಮಾರ್ಗದರ್ಶಿ ಕರ್ನಾಟಕದ ವಿವಿಧ ಶಾಖೆಗಳ ವ್ಯವಸ್ಥಾಪಕರುಗಳು, ಚಿತ್ರದುರ್ಗ ಶಾಖೆಯ ವ್ಯವಸ್ಥಾಪಕ ಪ್ರವೀಣ ಬಿ.ಎ. ಹಾಗೂ ಗ್ರಾಹಕರುಗಳು ಉಪಸ್ಥಿತರಿದ್ದು, ಶುಭ ಹಾರೈಸಿದರು.

ಮಾರ್ಗದರ್ಶಿ ಚಿಟ್ಸ್ ಫಂಡ್​ 122ನೇ ಶಾಖೆ ಉದ್ಘಾಟನೆ (ETV Bharat)

ಚಿತ್ರದುರ್ಗ ಶಾಖೆ ಉದ್ಘಾಟನೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮಾರ್ಗದರ್ಶಿ ವ್ಯವಸ್ಥಾಪಕ ನಿರ್ದೇಶಕಿಯವರಾದ ಶೈಜಾ ಕಿರಣ್ ಅವರು, ''ಮಾರ್ಗದರ್ಶಿ ಚಿಟ್ಸ್ ಆಂದ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ವ್ಯಾಪ್ತಿ ಹೊಂದಿದೆ. ಈ ನಾಲ್ಕು ರಾಜ್ಯಗಳಲ್ಲಿ ಈಗಾಗಲೇ 121 ಶಾಖೆಗಳು ಯಶಸ್ವಿಯಾಗಿ ನಡೆಯುತ್ತಿವೆ. 122ನೇ ಶಾಖೆಯನ್ನು ಚಿತ್ರದುರ್ಗದಲ್ಲಿ ಇಂದಿನಿಂದ ಪ್ರಾರಂಭಿಸಿರುವುದು ತಮಗೆ ಸಂತಸ ತಂದಿದೆ'' ಎಂದು ಹೇಳಿದರು.

ಮಾರ್ಗದರ್ಶಿ ಚಿಟ್ಸ್​​​​​ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಶೈಲಜಾ ಕಿರಣ್ (ETV Bharat)

'ಕರ್ನಾಟಕದಲ್ಲಿ ಮಾರ್ಗದರ್ಶಿಯ 26ನೇ ಶಾಖೆ ಇದಾಗಿದೆ. ಈ ವರ್ಷ ಇನ್ನೂ ಐದರಿಂದ ಆರು ಮಾರ್ಗದರ್ಶಿ ಚಿಟ್ಸ್ ಶಾಖೆಗಳನ್ನು ಪ್ರಾರಂಭಿಸುವ ಉದ್ದೇಶವಿದೆ'' ಎಂದು ತಿಳಿಸಿದರು.

''ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರ್ಗದರ್ಶಿ ಚಿಟ್ಸ್ ಕಂಪನಿ ಹತ್ತು ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಸಿದೆ. ಬರುವ ಹಣಕಾಸು ವರ್ಷದಲ್ಲಿ 13 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಇಟ್ಟುಕೊಳ್ಳಲಾಗಿದೆ. ಮಾರ್ಗದರ್ಶಿ ಚಿಟ್ಸ್ 2.50 ಲಕ್ಷ ಗ್ರಾಹಕರನ್ನು ಹೊಂದಿದೆ. 2.50 ಲಕ್ಷ ರೂಪಾಯಿಗಳಿಂದ 1 ಕೋಟಿ ರೂ. ತನಕ ಬಿಡ್ ಮೊತ್ತದ ಚಿಟ್ಸ್ ಸೌಲಭ್ಯ ಗ್ರಾಹಕರಿಗೆ ಲಭ್ಯವಿದೆ'' ಎಂದು ಶೈಲಜಾ ಅವರು ಕಂಪನಿಯ ಸಾಧನೆಗಳನ್ನು ವಿವರಿಸಿದರು.

ಮಾರ್ಗದರ್ಶಿ ಚಿಟ್ಸ್ ಫಂಡ್​ ಬಗ್ಗೆ ಗ್ರಾಹಕರ ಮಾತು (ETV Bharat)

''ಮಾರ್ಗದರ್ಶಿ ಚಿಟ್ಸ್ ಸಂಸ್ಥೆ ಎಲ್ಲಾ ವರ್ಗದ ಜನರ ಆಶಾಕಿರಣವಾಗಿದೆ. ರೈತರು, ಶಿಕ್ಷಕರು, ವೈದ್ಯರು, ಇಂಜನೀಯರ್​​ಗಳು, ವರ್ತಕರು, ಕೈಗಾರಿಕೋದ್ಯಮಿಗಳು, ಪ್ಲಾಂಟೇಶನ್​​ದಾರರು, ಚಾರ್ಟರ್ಡ್ ಅಕೌಂಟೆಂಟ್ಸ್ ಗಳು , ಐಟಿ ಬಿಟಿ ಕ್ಷೇತ್ರದವರೂ ಸೇರಿದಂತೆ ಎಲ್ಲಾ ವಲಯದ ಜನರನ್ನು ತಲುಪಿದೆ'' ಎಂದು ಅವರು ಹೇಳಿದರು.

''ಮಾರ್ಗದರ್ಶಿ ಚಿಟ್ಸ್ 62 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. ಒಂದು ಕುಟುಂಬದ ಮುತ್ತಜ್ಜ, ಅಜ್ಜ, ಮಕ್ಕಳು, ಮೊಮ್ಮಕ್ಕಳವರೆಗಿನವರು ಮಾರ್ಗದರ್ಶಿಯಲ್ಲಿ ಚಿಟ್ಸ್ ಗಳನ್ನು ಹಾಕುತ್ತಾ ಬಂದಿದ್ದಾರೆ. ಗ್ರಾಹಕರು ಅತಿ ಹೆಚ್ಚಿನ ವಿಶ್ವಾಸವನ್ನು ಮಾರ್ಗದರ್ಶಿ ಕಂಪನಿ ಮೇಲೆ ಇಟ್ಟುಕೊಂಡಿದ್ದಾರೆ'' ಎಂದು ತಿಳಿಸಿದರು.

margadarshi-chits-122nd-branch-inaugurated-in-chitradurga
ಮಾರ್ಗದರ್ಶಿ ಚಿಟ್ಸ್ ಫಂಡ್​ 122ನೇ ಶಾಖೆ ಉದ್ಘಾಟನೆ (ETV Bharat)

''ಗ್ರಾಹಕರಿಗೆ ಮಾರ್ಗದರ್ಶಿ ಚಿಟ್ಸ್ ಉತ್ತಮ ಉಳಿತಾಯ ಯೋಜನೆಯಾಗಿದೆ. ಇಲ್ಲಿ ಹಾಕಿರುವ ಚೀಟಿ ಹಣದಿಂದ ಗ್ರಾಹಕರು ಭೂಮಿ ಖರೀದಿಸಲು, ಮನೆ ಕಟ್ಟಲು, ಹೊಸ ವ್ಯಾಪಾರ ಶುರುಮಾಡಲು, ಮಕ್ಕಳ ವಿದ್ಯಾಭ್ಯಾಸ, ಮಕ್ಕಳ ಮದುವೆ ಸೇರಿದಂತೆ ಹಲವಾರು ಅಗತ್ಯತೆಗಳಿಗೆ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ'' ಎಂದು ಶೈಲಜಾ ಕಿರಣ್ ಹೇಳಿದರು.

ಚಿತ್ರದುರ್ಗದಲ್ಲಿ ಮಾರ್ಗದರ್ಶಿ ಚಿಟ್ಸ್​​​ ಶಾಖೆ ಉದ್ಘಾಟಗೊಂಡಿದ್ದಕ್ಕೆ ಗ್ರಾಹಕರು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಲವಾರು ಗ್ರಾಹಕರು, ಮಾರ್ಗದರ್ಶಿ ಚಿಟ್​​ ಸಂಸ್ಥೆಯಿಂದ ತಮಗೆ ಬಹಳಷ್ಟು ಅನುಕೂಲವಾಗಿದೆ. ತಮ್ಮೆಲ್ಲಾ ಆರ್ಥಿಕ ಅಗತ್ಯತೆಗಳಿಗೆ ಮಾರ್ಗದರ್ಶಿ ದಾರಿದೀಪವಾಗಿದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

ಮಾರ್ಗದರ್ಶಿ ಚಿಟ್​​ ಫಂಡ್​ 122ನೇ ಶಾಖೆ ಉದ್ಘಾಟನೆ ಕಾರ್ಯಕ್ರಮ (ETV Bharat)

ನನ್ನ ಮಕ್ಕಳ ಶಿಕ್ಷಣಕ್ಕೂ ಸಹಾಯ : ಕಂಪನಿಯ ಗ್ರಾಹಕರಾದ ಪ್ರಶಾಂತ್​ ಮಾತನಾಡಿ, ''ನನಗೆ ಕಳೆದ 18 ವರ್ಷಗಳಿಂದಲೂ ಮಾರ್ಗದರ್ಶಿ ಚಿಟ್​ ಫಂಡ್​ ನೆರವಾಗಿದೆ. ನಾನೊಬ್ಬ ರೈತನಾಗಿ ನನಗೆ ಬಹಳಷ್ಟು ಉಪಯೋಗವಾಗಿದೆ. ಸರಿಯಾದ ಸಮಯಕ್ಕೆ ಚೀಟಿ ಹಣ ಸಿಗುತ್ತದೆ. ಕಂಪನಿಯ ಮೇಲೆ ತುಂಬಾ ನಂಬಿಕೆ ಇದೆ. ಕಂಪನಿಯು ತುಂಬಾ ಸ್ಟಾಂಡರ್ಡ್​ ಹೊಂದಿದೆ. ಇದರಿಂದ ನನ್ನ ಮಕ್ಕಳ ಶಿಕ್ಷಣಕ್ಕೂ ಸಹಾಯವಾಗಿದೆ. ನನಗೆ ಅಡಿಕೆ ತೋಟವಿದ್ದು, ಬೋರ್​ವೆಲ್​ ತೆಗೆಸಲು ಕೂಡ ಹಣದ ನೆರವಾಗಿದೆ. ಕಂಪನಿಯ ಸಿಬ್ಬಂದಿಯೂ ಕೂಡ ನಮ್ಮೊಂದಿಗೆ ಉತ್ತಮವಾಗಿ ಸ್ಪಂದಿಸುತ್ತಾರೆ'' ಎಂದು ತಿಳಿಸಿದರು.

ಮಾರ್ಗದರ್ಶಿ ನಮಗೆ ದಾರಿದೀಪ : ''ನನಗೆ ನನ್ನ ಸ್ನೇಹಿತರೊಬ್ಬರಿಂದ ಈ ಮಾರ್ಗದರ್ಶಿ ಚಿಟ್​ ಫಂಡ್​ ಪರಿಚಯ ಆಯಿತು. 15 ವರ್ಷಗಳಿಂದಲೂ ನಿರಂತರವಾಗಿ ನಾವು ಗ್ರಾಹಕರಾಗಿದ್ದೇನೆ. ಮಾರ್ಗದರ್ಶಿ ಎಂದರೆ ನಮಗೆ ನೂರಕ್ಕೆ ನೂರರಷ್ಟು ನಂಬಿಕೆ. ಇದು ನಮಗೆ ದಾರಿದೀಪವಾಗಿದೆ. ನಾನು ಐಟಿಐ ಕಾಲೇಜಿನ ಪ್ರಿನ್ಸಿಪಾಲ್​ ಆಗಿದ್ದೇನೆ. ನನ್ನ ಕಾಲೇಜಿನ ಅಭಿವೃದ್ಧಿಗೆ ಹಣದ ನೆರವಾಗಿದೆ. ನನ್ನ ಮಕ್ಕಳ ಶಿಕ್ಷಣಕ್ಕೂ ಅನುಕೂಲವಾಗಿದೆ. ಇದೀಗ ನಮ್ಮ ಜಿಲ್ಲೆ ಚಿತ್ರದುರ್ಗದಲ್ಲೇ ಶಾಖೆ ಉದ್ಘಾಟನೆ ಆಗಿರುವುದು ನಮಗೆ ಬಹಳಷ್ಟು ಸಂತಸವಾಗುತ್ತಿದೆ'' ಎಂದು ಮತ್ತೋರ್ವ ಗ್ರಾಹಕ ಸೈಯದ್​ ಅಹಮದ್​ ಆವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬೆಳಗಾವಿಯಲ್ಲಿದೆ ಇ-ಗ್ರಂಥಾಲಯ: ಪುಸ್ತಕ, ಕಂಪ್ಯೂಟರ್, ವೈಫೈ ಫ್ರೀ; ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ತಾಲೀಮು ಕೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.