ಅನುರಾಗ್ ಕಶ್ಯಪ್ ಪ್ರಸ್ತುತಪಡಿಸುತ್ತಿರುವ 'ವಾಘಚಿಪಾಣಿ' ಚಿತ್ರ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ನಟೇಶ್ ಹೆಗಡೆ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ಇದು. ಈ ಪ್ರತಿಷ್ಠಿತ ಚಲನಚಿತ್ರೋತ್ಸವಕ್ಕೆ ಪ್ರವೇಶ ಪಡೆದ ಮೊದಲ ಕನ್ನಡ ಸಿನಿಮಾ ಇದು ಅನ್ನೋದು ಗಮನಾರ್ಹ ಸಂಗತಿ.
ಬರ್ಲಿನ್ ಫಿಲ್ಮ್ ಫೆಸ್ಟಿವಲ್ ಈಗಾಗಲೇ ಆರಂಭಗೊಂಡಿದ್ದು, ಟೈಗರ್ಸ್ ಪಾಂಡ್ ಅಥವಾ ವಾಘಚಿಪಾಣಿ ಸ್ಕ್ರೀನಿಂಗ್ ಸಹ ಶುರುವಾಗಿದೆ. ಫೆಬ್ರವರಿ 15ರ, ಶನಿವಾರದಂದು ಸಂಜೆ 7:15ಕ್ಕೆ ಪ್ರದರ್ಶನ (ವರ್ಲ್ಡ್ ಪ್ರೀಮಿಯರ್) ಕಂಡಿದೆ. ಫೆ.16, ಭಾನುವಾರ ಮಧ್ಯಾಹ್ನ 12:45ಕ್ಕೆ ಪ್ರದರ್ಶನ ಕಂಡಿದೆ. ಫೆ.18, ಮಂಗಳವಾರ ಅಂದರೆ ಸೋಮವಾರ ಬೆಳಗ್ಗೆ 9 ಗಂಟೆಗೆ ಪ್ರದರ್ಶನ (ಪ್ರೆಸ್ ಆ್ಯಂಡ್ ಇಂಡಸ್ಟ್ರಿ ಸ್ಕ್ರೀನಿಂಗ್) ಕಾಣಲಿದೆ. ಫೆ.20 ಗುರುವಾರ ಸಂಜೆ 7 ಗಂಟೆಗೆ ಮತ್ತು ಶುಕ್ರವಾರ ಮಧ್ಯಾಹ್ನ 2:30ಕ್ಕೆ ಪ್ರದರ್ಶನ ಕಾಣಲಿದೆ. ಚಿತ್ರದಲ್ಲಿ ನಟ ಅಚ್ಯುತ್ ಕುಮಾರ್ ನಟಿಸಿದ್ದಾರೆ.
ಇದನ್ನೂ ಓದಿ: ಪೋಷಕರ ಲೈಂಗಿಕ ಕ್ರಿಯೆ ಕುರಿತ ಹೇಳಿಕೆ ವಿವಾದ : ಫೆ.18ಕ್ಕೆ ವಿಚಾರಣೆಗೆ ಹಾಜರಾಗಲು ಸಮಯ್ ರೈನಾಗೆ ಸೂಚನೆ